ಹೆಬ್ರಿ : ಪಾಂಡುರಗ ರಮಣ ನಾಯಕ್ ಅಮೃತ ಭಾರತಿ ಪ. ಪೂ ಕಾಲೇಜಿನಲ್ಲಿ ವಿಜ್ಞಾನ ಸಂಘದ ಉದ್ಘಾಟನಾ ಕಾರ್ಯಕ್ರಮ ಆ. 5 ರಂದು ಜರುಗಿತು.
ಸಂಘಕ್ಕೆ ಚಾಲನೆ ನೀಡಿ ಮಾತನಾಡಿದ ಮಣಿಪಾಲ ಎಮ್.ಐ.ಟಿ. ಯ ಭೌತಶಾಸ್ತ್ರ ವಿಭಾಗದ ಡಾ. ಪ್ರಮೋದ್ ಕುಮಾರ್ ಶೆಟ್ಟಿ, ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಕ್ಷೇತ್ರದ ಕೊಡುಗೆ ಮಹತ್ತರವಾದುದು. ಇದಕ್ಕೆ ಉತ್ತಮ ನಿದರ್ಶನ ಚಂದ್ರಯಾನ – 3 ರ ಯಶಸ್ವಿ ಉಡಾವಣೆ. ವಿಜ್ಞಾನವು ಒಳಿತು ಕೆಡುಕು ಎರಡನ್ನೂ ಒಳಗೊಂಡಿದೆ. ತಾವು ಕಲಿತ ವಿದ್ಯೆಯಿಂದ ಹೊಸ ಹೊಸ ಅನ್ವೇಷಣೆ, ಸಂಶೋಧನೆಯೊಂದಿಗೆ ದೇಶದ ಪ್ರಗತಿಯಲ್ಲಿ ಹೊಸ ಕ್ರಾಂತಿಯನ್ನು ಸೃಷ್ಠಿಸಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಕಾರ್ಯದರ್ಶಿ ಜೀವನ್ ಕಂಸಾಗರ್, ಜೊತೆ ಕಾರ್ಯದರ್ಶಿ ನೂತನ್ ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅದಿತಿ ರಾಜೇಶ್ ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿ ಅನನ್ಯ ಡಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ವಿಜ್ಞಾನ ಸಂಘದ ಅಧ್ಯಕ್ಷೆ ಶ್ರೀಯಾ ಗಣೇಶ್ ಅಡಿಮೂಳೆ ವಂದಿಸಿದರು. ನವನೀತ್ ಡಾಂಗೆ ಸಹಕರಿಸಿದರು.
ವಾಣಿಜ್ಯ ಸಂಘದಿಂದ ಉಪನ್ಯಾಸ ಕಾರ್ಯಕ್ರಮ
ಕಾಲೇಜಿನ ವಾಣಿಜ್ಯ ಸಂಘದಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸೆಲೆಬ್ರಿಟಿ ಆಗುವುದು ಹೇಗೆ ? ಎಂಬ ವಿಚಾರದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮುಟ್ಲುಪಾಡಿ ಸುಹಾಸ್ ಶೆಟ್ಟಿ ಮಾತನಾಡಿ, ಪ್ರವೃತ್ತಿಗಳನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡಾಗ ಯಶಸ್ಸಿನ ಮೆಟ್ಟಿಲೇರುವುದು ಸುಲಭ. ಆದರೆ, ನಿರಂತರ ಪರಿಶ್ರಮ, ಕಾಯಕದ ಮೇಲೆ ಶ್ರದ್ಧೆ ಮತ್ತು ನಿಶ್ಚಿತ ಗುರಿ ಅವಶ್ಯ. ಒಬ್ಬ ಸೆಲೆಬ್ರಿಟಿಯಾಗುವುದಕ್ಕಿಂತ ನಂತರ ಅದರ ಗೌರವವನ್ನು ಕಾಯ್ದುಕೊಳ್ಳುವುದು ದೊಡ್ದ ಸವಾಲು ಎಂದರು.

ಈ ಸಂದರ್ಭ ಕಾಲೇಜು ಪ್ರಾಂಶುಪಾಲ ಅಮರೇಶ್ ಕುಮಾರ್ ಹೆಗ್ಡೆ , ಲೆಕ್ಕಶಾಸ್ತ್ರ ವಿಭಾಗದ ಉಪನ್ಯಾಸಕಿ ಅನಸೂಯ ಮಲ್ಯ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಸುನೀಲ್ ಕುಮಾರ್, ವ್ಯವಹಾರ ಅದ್ಯಯನ ಉಪನ್ಯಾಸಕಿ ದೀಕ್ಷಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕಿಶೋರ್ ಸ್ವಾಗತಿಸಿ, ಸಿಂಧೂರ್ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ವಿಜೇತ್‌ವಂದಿಸಿದರು. ಜಾರ್ಜ್ ಕೆ. ಸಾಜಿ ಸಹಕರಿಸಿದರು.

































