ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲು – ಸುನಿಲ್ ಕುಮಾರ್ ಕಿಡಿಕಿಡಿ

ಕಾಂಗ್ರೆಸ್ಸಿಗೇಕೆ ಹಿಂದೂಗಳ ಮೇಲೆ ಇಷ್ಟೊಂದು ದ್ವೇಷ ?

ಕಾರ್ಕಳ : ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ವಿಡಿಯೋ ಚಿತ್ರೀಕರಣ ಪ್ರಕರಣದ ತನಿಖೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರ ಕ್ರಮ ಖಂಡನೀಯ. ಘಟನೆ ನಡೆದು ವಾರ ಕಳೆದರೂ ಕ್ರಮ ಜರುಗಿಸಲು ಸಾಧ್ಯವಾಗದ ಕಾಂಗ್ರೆಸ್ ಗೆ ಹಿಂದೂ ಸಂಘಟನೆ ಮುಖಂಡರ ಮೇಲೆ 24 ಗಂಟೆಯೊಳಗೆ ಪ್ರಕರಣ ದಾಖಲಿಸುವ ಉತ್ಸಾಹ ಬಂದಿದೆ. ಇದು ಕಾಂಗ್ರೆಸ್ ನ ಹಿಂದೂ ವಿರೋಧಿ ನೀತಿಯ ಪರಮಾವಧಿ ನಡವಳಿಕೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾಂಗ್ರೆಸ್ ಹಾಗೂ ಪೊಲೀಸರ ವಿರುದ್ದ ಕಿಡಿಕಾರಿದ್ದಾರೆ.
‌
ವೀಡಿಯೊ ಪ್ರಕರಣ ನಡೆದು ಒಂದು ವಾರ ಕಳೆದಿದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮವಹಿಸಲು ಕಾಂಗ್ರೆಸ್ ಆಡಳಿತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಇದೀಗ ಪ್ರತಿಭಟನೆ ನಡೆಸಿ ಪ್ರಚೋದನಕಾರಿ ಭಾಷಣ ಮಾಡಿದರೆಂದು ಸಂಘಟನೆಗಳ ಮುಖಂಡರ ಮೇಲೆಯೆ ಪ್ರಕರಣ ದಾಖಲಿಸಿದ್ದಾರೆ. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳ ಮೇಲೆ ಯಾಕಿಷ್ಟು ದ್ವೇಷ ಎಂದು ಪ್ರಶ್ನಿಸಿದ್ದಾರೆ.

ಸಂಘಟಿತರಾಗುತ್ತೇವೆ
ಹಿಂದೂ ಸಂಘಟನೆ ಮೇಲೆ ಕಾಂಗ್ರೆಸ್ ಆರಂಭದಿಂದಲೂ ದಬ್ಬಾಳಿಕೆ, ದಮನ ನೀತಿ ಅನುಸರಿಸುತ್ತಲೆ ಬಂದಿದೆ. ಆದರೆ ಹಿಂದೂ ಸಂಘಟನೆ ಇದೆಲ್ಲವನ್ನು ಎದುರಿಸುತ್ತಲೆ ಬಂದಿದೆ. ದಮನಿಸಿದಷ್ಟು ಮತ್ತೆ ಸಂಘಟಿತರಾಗುವುದು ಹಿಂದೂ ಸಂಘಟನೆಯ ವಿಶೇಷ. ಒಂದು ವರ್ಗವನ್ನು ಓಲೈಸಲು ಕಾಂಗ್ರೆಸ್ ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲಿಸಿ ಹಿಂದೂ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ ನೀತಿಯನ್ನು ತಿದ್ದಿಕೊಳ್ಳದೆ ಇದ್ದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಲು ಹಿಂದೂ ಕಾರ್ಯಕರ್ತರು ಸಿದ್ಧರಿದ್ದಾರೆ ಎನ್ನುವುದನ್ನು ಕಾಂಗ್ರೆಸ್ ಇನ್ನಾದರೂ ಅರಿತು ಹಿಂದೂ ವಿರೋಧಿ ದ್ವೇಷದ ರಾಜಕಾರಣವನ್ನು ನಿಲ್ಲಿಸಲಿ ಸುನಿಲ್‌ ಕುಮಾರ್‌ ಸಲಹೆ ನೀಡಿದ್ದಾರೆ.





























































































































error: Content is protected !!
Scroll to Top