ಕಾರ್ಕಳ : ಸೂಡ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿದ್ದ ಭಾಸ್ಕರ್ ಟಿ. ಅವರು ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಶಿಕ್ಷಣಾಧಿಕಾರಿಯಾಗಿದ್ದ ಚಂದ್ರಯ್ಯ ಜಿ. ಅವರು ತಿಪಟೂರಿಗೆ ವರ್ಗಾವಣೆ ಹೊಂದಿದ ಕಾರಣ ಅವರ ಸ್ಥಾನಕ್ಕೆ ಭಾಸ್ಕರ್ ಟಿ. ಅವರನ್ನು ಪ್ರಭಾರ ನೆಲೆಯಲ್ಲಿ ನೇಮಕಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ಆದೇಶ ಹೊರಡಿಸಿರುತ್ತಾರೆ.
ಮೂಲತಃ ಸಾಗರದ ಸಿಗಂದೂರಿನವರಾಗಿರುವ ಭಾಸ್ಕರ್ ಅವರು 2010ರಲ್ಲಿ ನಲ್ಲೂರು ಶಾಲೆಯಲ್ಲಿ ಶಿಕ್ಷಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ್ದರು. ತದನಂತರ 2014ರಿಂದ 2022ರ ವರೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ, ಬಳಿಕ ಸೂಡ ಸರಕಾರಿ ಮುಖ್ಯಶಿಕ್ಷಕರಾಗಿ ಜೊತೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.









































