ಕಾರ್ಕಳ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಸಹಯೋಗದಲ್ಲಿ ಆ. 1 ರಂದು ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಕ್ರೈಸ್ಟ್ಕಿಂಗ್ನ ವಿದ್ಯಾರ್ಥಿಗಳಾದ ಸಾವನ್ ವರ್ಮ(9ನೇ ತರಗತಿ) ಹಾಗೂ ಆಯುಶ್ರೀ (7ನೇ ತರಗತಿ) ಅವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಪ್ರಾಥಮಿಕ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಅದಿತಿ ದ್ವಿತೀಯ ಸ್ಥಾನ, ಶಗುನ್ ವರ್ಮ ತೃತೀಯ ಸ್ಥಾನ, ರಿತು ಪ್ರಾನ್ಸಿಸ್ ದ್ವಿತೀಯ ಸ್ಥಾನ (7ನೇ ತರಗತಿ) ಹಾಗೂ ಅದ್ವೈತ್ ದ್ವಿತೀಯ ಸ್ಥಾನ (6ನೇ ತರಗತಿ), ಪ್ರೌಢ ಶಾಲಾ ವಿಭಾಗದಲ್ಲಿ ಅಬ್ದುಲ್ ಸಫ್ವಾನ್ ತೃತೀಯ ಸ್ಥಾನ (8ನೇ ತರಗತಿ) ಹಾಗೂ ಸಮ್ಯಕ್ ದ್ವಿತೀಯ ಸ್ಥಾನ (9ನೇ ತರಗತಿ) ಪಡೆದುಕೊಂಡಿದ್ದಾರೆ.



































