ಕಾಂಗ್ರೆಸ್ – 10, ಬಿಜೆಪಿ – 3
ಕಾರ್ಕಳ : ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಜು. 30 ರಂದು ನಡೆದ ಚುನಾವಣೆಯಲ್ಲಿ 13 ಮಂದಿ ಸದಸ್ಯರ ಪೈಕಿ 10 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸದಸ್ಯರಲ್ಲಿ ಸಾಮಾನ್ಯ ವಿಭಾಗದಲ್ಲಿ ಶ್ರೀಧರ್ ಪೂಜಾರಿ, ಸತೀಶ್ ನಾಯಕ್, ಗುಣಕರ ಪೂಜಾರಿ, ಸತೀಶ್ ಕುಮಾರ್, ಸುನಿಲ್ ಪೂಜಾರಿ, ಹಿಂದುಳಿದ ವರ್ಗ ಎ ವಿಭಾಗದಲ್ಲಿ ದಯಾನಂದ ನಾಯಕ್, ಬಿ ವಿಭಾಗದಲ್ಲಿ ಧರಣೇಂದ್ರ ಜೈನ್, ಮಹಿಳಾ ಮೀಸಲಾತಿಯಲ್ಲಿ ಸುರೇಖಾ ಸೇರ್ವೆಗಾರ್ ಮತ್ತು ವಂದನಾ ಪೂಜಾರಿ ಹಾಗೂ ಪರಿಶಿಷ್ಟ ಪಂಗಡ ವಿಭಾಗದಲ್ಲಿ ಗೋಪಾಲ ನಾಯ್ಕ್ ಆಯ್ಕೆಯಾಗಿದ್ದಾರೆ.

ಬಿಜೆಪಿ ಬೆಂಬಲಿತರಲ್ಲಿ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಲಲಿತಾ ಪಾಣರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ವಿಭಾಗದಲ್ಲಿ ಸುಂದರ್ ಪೂಜಾರಿ ಹಾಗೂ ಸುಧೀರ್ ಪೂಜಾರಿ ಗೆಲುವು ಪಡೆದಿದ್ದಾರೆ.









































