ಹೆಬ್ರಿ : ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಗಾಯಗೊಂಡಿರುವ ಘಟನೆ ಜು. 28ರಂದು ಮದ್ದೂರು ಸಮೀಪ ಸಂಭವಿಸಿದೆ. ಗಣಪತಿ ನಾಯ್ಕ ಎಂಬವರು ಸಂಜೆ 7.30ರ ಹೊತ್ತಿಗೆ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಚಾಕ್ಟಿಕಟ್ಟೆ ಎಂಬಲ್ಲಿ ತಲುಪುವಾಗ ಹಿಂಬದಿಯಿಂದ ಬಂದ ಸಂದೀಪ ಕುಲಾಲ್ ಎಂಬಾತ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಗಣಪತಿ ನಾಯ್ಕ ಅವರ ತಲೆಗೆ ಗಾಯವಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































