ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ತಪ್ಪು ಮಾಹಿತಿಯಿಂದ ಸಮಸ್ಯೆ
ಮುಂಬಯಿ : ನಕ್ಷತ್ರದ ಗುರುತು ಇರುವ 500 ರೂ. ನಕಲಿಯಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ 500 ರೂ. ನೋಟುಗಳ ನಂಬರ್ ಜತೆಗೆ ಸ್ಟಾರ್ ಇರುವ ನೋಟು ನಕಲಿ, ಇವುಗಳನ್ನು ಯಾರೂ ಸ್ವೀಕರಿಸಬಾರದು ಎಂಬ ದಾರಿ ತಪ್ಪಿಸುವ ಸಂದೇಶವೊಂದು ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ನೀಡಿರುವ ಆರ್‌ಬಿಐ ದೋಷಪೂರಿತವಾಗಿ ಮುದ್ರಿಸಿದ ನೋಟುಗಳ ಬದಲಾಗಿ ಮುದ್ರಿಸಿದ ನೋಟುಗಳ ನಂಬರ್ ನಡುವೆ ಸ್ಟಾರ್ ಗುರುತು ಸೇರಿಸಲಾಗಿದೆ. ಇವು ಚಲಾವಣೆಗೆ ಸಿಂಧುವಾಗಿರುವ ನೋಟುಗಳು, ಸೋಷಿಯಲ್ ಮೀಡಿಯಾದ ಸುಳ್ಳು ಸುದ್ದಿಗಳನ್ನು ಯಾರೂ ನಂಬಬಾರದು ಎಂದು ಹೇಳಿದೆ.





































