ಮೀನು ಹಿಡಿಯಲು ಹೋಗಿ ಸಂಭವಿಸಿದ ದುರಂತ
ಮಂಗಳೂರು : ಮೀನು ಹಿಡಿಯಲು ಕೆರೆಗೆ ಇಳಿದ ವ್ಯಕ್ತಿ ಮುಳುಗಿ ಮೃತಪಟ್ಟ ಘಟನೆ ಪಣಂಬೂರು ಸಮೀಪ ಸಂಭವಿಸಿದೆ. ಪೋರ್ಕೋಡಿಯ ನಿವಾಸಿ ಪೂವಪ್ಪ (40) ಮೃತಪಟ್ಟವರು.ಪೂವಪ್ಪ ಸಹೋದರನ ಜತೆ ಮೀನು ಹಿಡಿಯಲೆಂದು ನಿನ್ನೆ ತೋಕೂರಿನ ಜಾರಂದಾಯ ದೈವಸ್ಥಾನದ ಗುತ್ತಿನ ಮನೆಯ ಸಮೀಪ ಇರುವ ಕೆರೆಗೆ ಇಳಿದಿದ್ದರು. ಆದರೆ ಕೆರೆಯಲ್ಲಿ ವಿಪರೀತ ಕೆಸರು ಇದ್ದು, ಅದರಲ್ಲಿ ಸಿಲುಕಿಕೊಂಡ ಪೋವಪ್ಪ ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾರೆ.






























































