ಜು.13 : ಚಂದ್ರಯಾನ-3 ಉಡಾಯನ : ಇಸ್ರೋ

ನವದೆಹಲಿ : ಜು.13ರಂದು ಮಧ್ಯಾಹ್ನ 2:30ಕ್ಕೆ ಚಂದ್ರಯಾನ-3 ಉಡಾವಣೆಯಾಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಘೋಷಿಸಿದೆ. ಚಂದ್ರನ ಕಕ್ಷೆಗೆ ಕಳಿಸಲಾಗುತ್ತಿರುವ 3ನೇ ನೌಕೆ ಇದಾಗಿದ್ದು, 2019ರಲ್ಲಿ ಚಂದ್ರಯಾನ-2 ಉಡಾವಣೆಯಾಗಿತ್ತು. ಕಳೆದ ಬಾರಿ ಮಿಷನ್ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನ್ನು ಸುಗಮವಾಗಿ ಸ್ಪರ್ಶಿಸಲು ಸಾಧ್ಯವಾಗಿರಲಿಲ್ಲ. ಚಂದ್ರಯಾನ-3 ಯಶಸ್ವಿಯಾಗಲಿದೆ ಎಂಬ ವಿಶ್ವಾಸ ಇಸ್ರೋ ಅಧಿಕಾರಿಗಳದ್ದು, ಈ ಬಾರಿಯ ಪ್ರಯೋಗದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ.

ಉಡಾವಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಚಂದ್ರಯಾನ-3ರ ಹಾರ್ಡ್‌ವೇರ್, ರಚನೆ, ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಸಂವೇದಕಗಳನ್ನು ಸುಧಾರಿಸಲಾಗಿದೆ. ವಾಹನಕ್ಕೆ ಹೆಚ್ಚಿನ ಇಂಧನವನ್ನು ಸೇರಿಸಲಾಗಿದೆ, ಲ್ಯಾಂಡಿಂಗ್ ಕಾಲುಗಳನ್ನು ಬಲಪಡಿಸಲಾಗಿದೆ ಎಂದು ಹೇಳಿದರು. ಹೆಚ್ಚಿನ ಶಕ್ತಿ ಉತ್ಪಾದನೆಗಾಗಿ ದೊಡ್ಡ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಮತ್ತೊಂದು ಹೆಚ್ಚುವರಿ ಸಂವೇದಕವನ್ನು ಸಹ ಸೇರಿಸಲಾಗಿದೆ ಎಂದು ಇಸ್ರೋ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ನೌಕೆಯನ್ನು ಜಿಎಸ್ಎಲ್‌ವಿ ಮಾರ್ಕ್ 3 ವಾಹಕದ ಮೂಲಕ ಉಡಾವಣೆಯಾಗಲಿದೆ. ಇದಕ್ಕಾಗಿ 615 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಇಸ್ರೋ ಸಂಸ್ಥೆ ಹೇಳಿದೆ.















































































error: Content is protected !!
Scroll to Top