ಬಿಹಾರದಲ್ಲಿ ಬಿಜೆಪಿ-ವಿಪಕ್ಷಗಳ ನಡುವೆ ಪೋಸ್ಟರ್ ವಾರ್
ಪಾಟ್ನಾ: ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಒಗ್ಗಟ್ಟಿನ ಸಭೆ ಸಂದರ್ಭದಲ್ಲಿ ಬಿಜೆಪಿ ಮತ್ತು ಪ್ರತಿಪ್ಷಕಗಳ ನಡುವೆ ಪೋಸ್ಟರ್ ವಾರ್ ನಡೆಯುತ್ತಿದೆ. ಬಿಜೆಪಿ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಾಲಿವುಡ್‌ನ ಪ್ರಸಿದ್ಧ ಪಾತ್ರ ‘ದೇವದಾಸ್’ಗೆ ಹೋಲಿಸಿ ಪೋಸ್ಟರ್ ಹಾಕಿ ಗೇಲಿ ಮಾಡಿದೆ.
ಪೋಸ್ಟರ್‌ನಲ್ಲಿ ಒಂದು ತುದಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಇನ್ನೊಂದು ತುದಿಯಲ್ಲಿ ರಾಹುಲ್ ಗಾಂಧಿ ಚಿತ್ರವಿದೆ. ಶಾರುಖ್ ಖಾನ್ ಚಿತ್ರದ ಪಕ್ಕ ಬಾಲಿವುಡ್ ಚಲನಚಿತ್ರ ‘ದೇವದಾಸ್’ನ ಪ್ರಸಿದ್ಧ ಸಂಭಾಷಣೆಯಾದ ‘ಬಾಬುಜಿ ನೆ ಕಹಾ ಗಾಂವ್ ಛೋಡ್ ದೋ, ಪರೋ ನೆ ಕಹಾ ಶರಬ್ ಛೋಡ್ ದೋ’ ಎಂದು ಬರೆಯಲಾಗಿದೆ.
ರಾಹುಲ್ ಗಾಂಧಿಯವರ ಚಿತ್ರದ ಜೊತೆಗೆ, ‘ಮಮತಾ ದೀದಿ ನೆ ಕಹಾ ಬೆಂಗಾಲ್ ಛೋಡ್ ದೋ, ಕೇಜ್ರಿವಾಲ್ ನೆ ಕಹಾ ದೆಹಲಿ ಔರ್ ಪಂಜಾಬ್ ಛೋಡ್ ದೋ, ಲಾಲು-ನಿತೀಶ್ ನೆ ಕಹಾ ಬಿಹಾರ್ ಛೋಡ್ ದೋ, ಅಖಿಲೇಶ್ ನೇ ಕಹಾ ಉತ್ತರ ಪ್ರದೇಶ ಛೋಡ್ ದೋ, ಸ್ಟಾಲಿನ್ ನೆ ಕಹಾ ತಮಿಳುನಾಡು ಛೋಡ್ ದೋ, ವೋ ದಿನ್ ದೂರ್ ನಹೀ ಜಬ್ ಸಬ್ ಮಿಲ್ ಕಹೆಂಗೆ ಕಿ ಕಾಂಗ್ರೆಸಿ (ರಾಹುಲ್) ರಾಜನೀತಿ ಛೋಡ್ ದೋ’ ಎಂದು ಬರೆಯಲಾಗಿದೆ.
2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯೇತರ ಪಕ್ಷಗಳ ಸಭೆಗಾಗಿ ಪಾಟ್ನಾಕ್ಕೆ ಬರುವ ಪ್ರತಿಪಕ್ಷ ನಾಯಕರನ್ನು ಬಿಜೆಪಿ ಗುರಿಯಾಗಿಸಿರುವ ಬಿಜೆಪಿ, ಬಿಹಾರದಲ್ಲಿ ಗುರುವಾರದಿಂದ ಪೋಸ್ಟರ್ ವಾರ್ ಮುಂದುವರಿಸಿದೆ.






























































