ಅಂಗಡಿಗೆ ಬಂತು ಒಂದು ಕೋಟಿ ರೂ. ವಿದ್ಯುತ್‌ ಬಿಲ್‌

ಮೀಟರ್‌ ರೀಡರ್‌ ಮಾಡಿದ ಎಡವಟ್ಟಿನಿಂದ ಮಾಲಕರಿಗೆ ಶಾಕ್‌

ಉಡುಪಿ: ಕಾಂಗ್ರೆಸ್‌ನ ಗೃಹಜ್ಯೋತಿ ಕೊಡುಗೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ವಿದ್ಯುತ್‌ ಬಿಲ್‌ ಏರಿಕೆಯಾಗಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿರುವಾಗಲೇ ಕುಂದಾಪುರದ ಅಂಗಡಿ ಮಾಲಕರೊಬ್ಬರಿಗೆ ಬರೋಬ್ಬರಿ 1 ಕೋ. ರೂ. ಬಿಲ್‌ ನೀಡಿ ವಿದ್ಯುತ್‌ ಇಲಾಖೆ ಇನ್ನಿಲ್ಲದ ಶಾಕ್‌ ಣಿಡಿದೆ. ಇದಕ್ಕೆ ಗೃಹಜ್ಯೋತಿ ಯೋಜನೆ ಕಾರಣವಲ್ಲ. ಬದಲಾಗಿ ಮೀಟರ್‌ ರೀಡರ್‌ ಮಾಡಿದವರ ಎಡವಟ್ಟು ಎನ್ನಲಾಗಿದೆ.
ಕುಂದಾಪುರದಲ್ಲಿರುವ ಶ್ರೀ ಸಾಯಿ ಸೆಂಟರ್‌ ಎಂಬ ಮಳಿಗೆಗೆ 1 ಕೋಟಿ ರೂ. ಬಿಲ್ ನೀಡಲಾಗಿದೆ. ಇಲ್ಲಿ 1,574 ಯೂನಿಟ್ ವಿದ್ಯುತ್ ಬಳಕೆಯಾಗಿದೆ. ಆದರೆ, ಬಿಲ್‌ನಲ್ಲಿ 13,11,155 ಯೂನಿಟ್ಎಂದು ತೋರಿಸಲಾಗಿದೆ. ಹೀಗಾಗಿ ಅದಕ್ಕೆ 91,78,085 ರೂಪಾಯಿ ಬಿಲ್ ಹಾಗೂ 8,26,027 ರೂಪಾಯಿ ತೆರಿಗೆ ಮತ್ತು 1,70,450 ರೂಪಾಯಿ ಇಂಧನ ಹೊಂದಾಣಿಕೆ ಶುಲ್ಕ ಸಹಿತ ಒಟ್ಟು 1,01,75,863 ರೂ. ಬಿಲ್ ಮೊತ್ತ ಹಾಕಲಾಗಿದೆ.
ರೀಡರ್ ಕೊನೆಗೆ ಒಂದು ಸೊನ್ನೆಯನ್ನು ಹೆಚ್ಚುವರಿಯಾಗಿ ಒತ್ತಿರುವುದೇ ಅವಾಂತರಕ್ಕೆ ಕಾರಣ. ತಪ್ಪಿನ ಅರಿವು ರೀಡರ್ ಗಮನಕ್ಕೆ ಬಂದಿದ್ದರೂ ಒಮ್ಮೆ ನೀಡಿದ ಬಿಲ್ ರದ್ದು ಮಾಡಲಾಗುವುದಿಲ್ಲ. ಆದರೆ ಮೆಸ್ಕಾಂ ಗಮನಕ್ಕೆ ತಂದ ಬಳಿಕ ಬೇರೆ ಬಿಲ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 145509 ಬರೆಯಬೇಕಾದವರು, ಕೊನೆಯಲ್ಲಿ ಒಂದು ಸೊನ್ನೆಯನ್ನು ಸೇರಿಸಿಕೊಂಡಿದ್ದು ಸಮಸ್ಯೆಗೆ ಕಾರಣವಾಯಿತು.
ಇಂಥದ್ದೇ ಪ್ರಕರಣ ಈ ಹಿಂದೆ ಹಲವೆಡೆ ವರದಿಯಾಗಿದೆ. ಬೆಳಗಾವಿ ವಿವಿಗೆ 18 ಲಕ್ಷ ರೂಪಾಯಿ ಬದಲಿಗೆ 35 ಲಕ್ಷ ರೂ, ಮಂಗಳೂರಿನ ಉಳ್ಳಾಲ ಬಳಿ 3 ಸಾವಿರ ರೂ ಬಿಲ್ ಬರುತ್ತಿದ್ದ ಮನೆಗೆ 7.71 ಲಕ್ಷ ರೂ, ಕುಂದಾಪುರದಲ್ಲಿ ಕೇವಲ 2 ಯೂನಿಟ್ ಬಳಸಿದ ಅಂಗಡಿಗೆ 1 ಸಾವಿರ ರೂ ಬಿಲ್ ವಿತರಣೆಯಾದದ್ದು ವರದಿಯಾಗಿತ್ತು.











































































error: Content is protected !!
Scroll to Top