ನಾಲ್ಕು ಉಗ್ರರು ಎನ್‌ಕೌಂಟರ್‌ಗೆ ಬಲಿ

ಗಡಿಯಲ್ಲಿ ಒಳ ನುಸುಳಲು ಯತ್ನಿಸಿದ ಪಾಕಿಸ್ಥಾನಿ ಭಯೋತ್ಪಾದಕರು

ಕುಪ್ವಾರ: ಒಳ ನುಸುಳಿ ಬರಲು ಯತ್ನಿಸಿದ್ದ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಸಾಯಿಸಿದೆ. ಶುಕ್ರವಾರ ನಸುಕಿನ ಹೊತ್ತು ಕುಪ್ವಾರ ಜಿಲ್ಲೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದಿಂದ ಒಳ ನುಸುಳಲು ಯತ್ನಸಿದ ನಾಲ್ವರು ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ. ಭದ್ರತಾ ಪಡೆ ಮತ್ತು ಸ್ಥಳೀಯ ಪೊಲೀಸದರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಇದು ಈ ವಾರದಲ್ಲಿ ನಡೆದಿರುವ ಎರಡನೇ ದೊಡ್ಡ ಎನ್‌ಕೌಂಟರ್‌. ಇಂದಿನಿಂದ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಎನ್‌ಕೌಂಟರ್‌ ನಡೆದಿದೆ.













































































error: Content is protected !!
Scroll to Top