ಉಚಿತ ಕರೆಂಟ್‌ ಬೆನ್ನಿಗೆ ವಿದ್ಯುತ್‌ ದರ ಏರಿಕೆ

ಯುನಿಟ್‌ಗೆ 70 ಪೈಸೆಯಂತೆ ಹೆಚ್ಚಿಸಿ ಆದೇಶ

ಬೆಂಗಳೂರು: ಗೃಹಜ್ಯೋತಿ ಸ್ಕೀಂನಲ್ಲಿ ಎಲ್ಲರಿಗೂ 200 ಯುನಿಟ್‌ ತನಕ ಉಚಿತ ವಿದ್ಯುತ್‌ ಕೊಟ್ಟಿರುವ ಸರಕಾರ ಇದೀಗ ಈ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ವಿದ್ಯುತ್‌ ಬಿಲ್‌ ಕಟ್ಟುವವರಿಗೆ ಬರೆ ಹಾಕಲು ಮುಂದಾಗಿದೆ. ಉಚಿತ ಘೋಷಣೆ ಬೆನ್ನಲ್ಲೇ ಜೂನ್ 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ (ಕೆಇಆರ್​ಸಿ) ಪ್ರತಿ ಯುನಿಟ್​​ ವಿದ್ಯುತ್​ಗೆ 70 ಪೈಸೆ ಹೆಚ್ಚಳ ಮಾಡಿ ಮೇ 12ರಂದು ಆದೇಶ ಪ್ರಕಟಿಸಿತ್ತು. ವಿದ್ಯುತ್ ಸರಬರಾಜು ಕಂಪನಿಗಳಿಗೆ ನಷ್ಟದ ಕಾರಣ ನೀಡಿ ಹೆಚ್ಚಳಿಕೆ ಮಾಡಲಾಗಿತ್ತು. ಇದೀಗ ಹೊಸ ಪರಿಷ್ಕೃತ ವಿದ್ಯುತ್​ ದರ ಜೂನ್ 1ರಿಂದಲೇ ಜಾರಿ ಆಗಲಿದೆ. ಏಪ್ರಿಲ್ 1ರಿಂದ ಹೊಸ ದರ ಅನ್ವಯ ಎಂದು ಕೆಇಆರ್​ಸಿ ಹೇಳಿತ್ತು. ಚುನಾವಣೆ ಘೋಷಣೆ ಹಿನ್ನೆಲೆ ದರ ಹೆಚ್ಚಳ ಆದೇಶಕ್ಕೆ ತಡೆಬಿದ್ದಿತ್ತು. ಹಾಗಾಗಿ ಜೂ. 1ರಿಂದ ಪರಿಷ್ಕೃತ ವಿದ್ಯುತ್ ದರವನ್ನು ಕೆಇಆರ್​ಸಿ ಜಾರಿಮಾಡಿದೆ.







































































error: Content is protected !!
Scroll to Top