ಯುವನಿಧಿ : ಉದ್ಯೋಗ ಸಿಕ್ಕಿದ ಮಾಹಿತಿ ನೀಡದಿದ್ದರೆ ದಂಡ ಗ್ಯಾರಂಟಿ

ನಿರುದ್ಯೋಗ ಭತ್ಯೆ ಮಾರ್ಗಸೂಚಿ ಪ್ರಕಟ

ಬೆಂಗಳೂರು: ಉದ್ಯೋಗ ಸಿಕ್ಕಿಯೂ ಈ ಬಗ್ಗೆ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ನಿರುದ್ಯೋಗ ಭತ್ಯೆ ಪಡೆದರೆ ಬೀಳುತ್ತೆ ದಂಡ. ತನ್ನ ಇನ್ನೊಂದು ಗ್ಯಾರಂಟಿ ಯುವನಿಧಿ ಬಗ್ಗೆ ಶನಿವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಸರಕಾರ ಈ ಷರತ್ತನ್ನು ಹಾಕಿದೆ. ಸರಕಾರಿ ಅಥವಾ ಖಾಸಗಿ ಉದ್ಯೋಗ ಸಿಕ್ಕಿದ ಕೂಡಲೇ ಯುವನಿಧಿ ಭತ್ಯೆ ಪಡೆಯುವುದನ್ನು ನಿಲ್ಲಿಸಬೇಕು. ಒಂದು ವೇಳೆ ಮುಂದುವರಿಸಿದರೆ ದಂಡ ಪಾವತಿಸಬೇಕಾಗುತ್ತದೆ ಎಂದು ಶನಿವಾರ ಹೊರಡಿಸಿದ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
2022-23ನೇ ಸಾಲಿನಲ್ಲಿ ಪದವಿ ಹಾಗೂ ಡಿಪ್ಲೊಮಾ ಪಡೆದವರಿಗೆ, ಪದವಿ/ಡಿಪ್ಲೋಮಾ ಮುಗಿಸಿ 6 ತಿಂಗಳು ಕಳೆದರೂ ಉದ್ಯೋಗ ಲಭಿಸದೆ ಇದ್ದರೆ ಯುವನಿಧಿ ಸೌಲಭ್ಯ ಅನ್ವಯವಾಗುತ್ತದೆ.
ಯುವನಿಧಿ ಸೌಲಭ್ಯ ಕರ್ನಾಟಕದವರಿಗೆ ಮಾತ್ರ ಅನ್ವಯ. 2 ವರ್ಷಗಳ ಅವಧಿಗೆ ಸೀಮಿತ. 2 ವರ್ಷದೊಳಗೆ ಉದ್ಯೋಗ ದೊರೆತರೆ ಘೋಷಣೆ ಮಾಡಬೇಕು. ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬೇಕು. ಡಿಬಿಟಿ ಮೂಲಕ ಹಣ ಹಾಕಲಾಗುತ್ತದೆ.
ನಿರುದ್ಯೋಗ ಸ್ಥಿತಿಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಸಿಕ್ಕ ಬಗ್ಗೆ ಮಾಹಿತಿ ನೀಡದಿದ್ದರೆ ದಂಡ.
ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು, ಬೇರೆ ಅಪ್ರಂಟಿಸ್‌ಶಿಪ್‌ ಪಡೆಯುವವರು, ರಾಜ್ಯ ಹಾಗೂ ಕೇಂದ್ರದ ವಿವಿಧ ಯೋಜನೆಯಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ನಡೆಸುವವರು ಯುವನಿಧಿ ಸೌಲಭ್ಯಕ್ಕೆ ಅರ್ಹರಲ್ಲ.







































































error: Content is protected !!
Scroll to Top