ಕಾರ್ಕಳ : ಕಳೆದ ವಾರಕ್ಕಿಂತ ಮಾರುಕಟ್ಟೆಯಲ್ಲಿ ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ. ಮಳೆ ಆರಂಭವಾಗುತ್ತಿದ್ದಂತೆ ಕ್ಯಾರೆಟ್, ಮೂಲಂಗಿ, ದೊಣ್ಣೆಮೆಣಸಿನ ಬೆಲೆಯಲ್ಲಿ ತುಸು ಏರಿಕೆ ಕಾಣುತ್ತಿದೆ. ಮೂಲಂಗಿ ಬೆಲೆ 30 ರಿಂದ 50 ರೂ.ಗೆ ಏರಿದೆ. 25 ರೂ. ಇದ್ದ ಮುಳ್ಳು ಸೌತೆ ಬೆಲೆ 40 ರೂ. ಗೆ ಏರಿಕೆಯಾಗಿದೆ. ಇನ್ನು ಮಂದಿನ ದಿನಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಟ್ಟುಗುಳ್ಳದ ದರ ಅಧಿಕವಿದ್ದು ಕೆ.ಜಿ ಗೆ 120 ರೂ. ಇದೆ.
ಇಂದಿನ ತರಕಾರಿ ದರ ಕೆ.ಜಿ.ಗೆ
ಕೊತ್ತಬಂರಿ ಸೊಪ್ಪು: 120 ರೂ., ಮುಳ್ಳುಸೌತೆ : 40 ರೂ., ಶುಂಠಿ : 160 -200 ರೂ., ಟೊಮ್ಯಾಟೋ : 25-30 ರೂ. , ನೀರುಳ್ಳಿ : 20 – 24ರೂ., ಬಟಾಟೆ : 25 -30ರೂ., ಬೆಳ್ಳುಳ್ಳಿ : 140 ರೂ., ಸೌತೆ : 25 ರೂ., ಬೀನ್ಸ್ : 80 ರೂ., ಬಿಳಿ ಬೀನ್ಸ್ – 60 ರೂ., ಕಾಯಿಮೆಣಸು : 60ರೂ., ಕ್ಯಾರೆಟ್ : 60 -80 ರೂ., ಬೀಟ್ರೋಟ್ : 30-40 ರೂ., ಕ್ಯಾಬೇಜ್ : 25 ರೂ., ಹೂಕೋಸು : 50 ರೂ., ಬೆಂಡೆ : 40- 50 ರೂ., ಕುಂಬಳಕಾಯಿ : 25 ರೂ., ಅಲಸಂಡೆ : 50- 60 ರೂ., ತೊಂಡೆಕಾಯಿ : 25-60 ರೂ., ಹಾಗಲಕಾಯಿ : 60 – 70 ರೂ., ಗೆಣಸು : 30 ರೂ., ಲಿಂಬೆ : 100 -120 ರೂ., ಮೂಲಂಗಿ : 50 ರೂ., ದೊಣ್ಣೆಮೆಣಸು : 80 ರೂ., ಉದ್ದ ಮೆಣಸು : 70 ರೂ., ಬದಣೆ : 30 ರೂ., ಗುಳ್ಳ : 80 ರೂ., ಮಟ್ಟುಗುಳ್ಳ – 120 ರೂ.




































