ಸುನಿಲ್‌ ಕುಮಾರ್‌ ಗೆಲುವಿನ ಸಂಭ್ರಮ

ಮನೆ ಮನೆ ಸಿಹಿ ಹಂಚಿದ ಮುಂಡ್ಲಿ ಗ್ರಾಮದ ಕಾರ್ಯಕರ್ತರು

ಕಾರ್ಕಳ : ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು, ಕಾರ್ಕಳದಲ್ಲಿ ವಿ. ಸುನಿಲ್‌ ಕುಮಾರ್‌ 77208 ಮತಗಳನ್ನು ಪಡೆದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಮುಂಡ್ಲಿ ಗ್ರಾಮದ ಬೂತ್‌ನಲ್ಲಿ ಬಿಜೆಪಿಯು ಈ ಮೊದಲಿನ ಚುನಾವಣೆಗಳಿಗಿಂತ ಮುನ್ನಡೆ ಪಡೆದಿದ್ದು, ಸುನಿಲ್‌ ಕುಮಾರ್‌ ಗೆಲುವಿಗೆ ಸಹಕರಿಸಿದೆ. ಈ ನಿಟ್ಟಿನಲ್ಲಿ ಗ್ರಾಮದ ಬಿಜೆಪಿ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಸಿಹಿ ತಿಂಡಿಯನ್ನು ಹಂಚುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ.









































































































error: Content is protected !!
Scroll to Top