113 ಕೋ. ರೂ. ತಲುಪಿದ ದಿ ಕೇರಳ ಸ್ಟೋರಿ ಕಲೆಕ್ಷನ್​

ಬೆಂಗಳೂರು : ಸುದೀಪ್ತೋ ಸೇನ್​ ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾ ತೆರೆಕಂಡು 10 ದಿನ ಕಳೆದಿದೆ. 9 ದಿನಗಳ ಕಲೆಕ್ಷನ್​ ರಿಪೋರ್ಟ್​ ಸಿಕ್ಕಿದೆ. ರಿಲೀಸ್​ ಆದಾಗಿನಿಂದ ಇಂದಿನ ತನಕ ಪ್ರತಿ ದಿನವೂ ಈ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ದಿನದಿಂದ ದಿನಕ್ಕೆ ಈ ಚಿತ್ರದ ಕಲೆಕ್ಷನ್​ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಅಂಶ. ಎರಡನೇ ಶನಿವಾರವಾರ ಮೇ 13ರಂದು ‘ದಿ ಕೇರಳ ಸ್ಟೋರಿ’ ಸಿನಿಮಾದ ಗಳಿಕೆಯಲ್ಲಿ ದಿಢೀರ್​ ಏರಿಕೆ ಆಗಿದೆ. 9ನೇ ದಿನ ಈ ಸಿನಿಮಾ 19.50 ಕೋಟಿ ರೂಪಾಯಿ ಕಮಾಯಿ ಮಾಡಿದೆ. ಅಲ್ಲಿಗೆ, ಚಿತ್ರದ ಒಟ್ಟು ಕಲೆಕ್ಷನ್​ 113 ಕೋಟಿ ರೂಪಾಯಿ ಆಗಿದೆ. ಈ ಗೆಲುವಿನಿಂದ ನಟಿ ಅದಾ ಶರ್ಮಾ ಅವರ ಖ್ಯಾತಿ ಹೆಚ್ಚಾಗಿದೆ. ಹೊಸ ಅವಕಾಶಗಳು ಅವರನ್ನು ಹುಡುಗಿಕೊಂಡು ಬರುತ್ತಿವೆ. ಇನ್ನೂ ಒಂದಷ್ಟು ದಿನಗಳ ಕಾಲ ದಿ ಕೇರಳ ಸ್ಟೋರಿ ಸಿನಿಮಾ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್​ ಮಾಡಲಿದೆ.

ದಿ ಕೇರಳ ಸ್ಟೋರಿ’ ಚಿತ್ರದ ಕಲೆಕ್ಷನ್​ ರಿಪೋರ್ಟ್​
1ನೇ ದಿನ: 8.03 ಕೋಟಿ ರೂ.
2ನೇ ದಿನ: 11.22 ಕೋಟಿ ರೂ.
3ನೇ ದಿನ: 16.40 ಕೋಟಿ ರೂ.
4ನೇ ದಿನ: 10.07 ಕೋಟಿ ರೂ.
5ನೇ ದಿನ: 11.14 ಕೋಟಿ ರೂ.
6ನೇ ದಿನ: 12 ಕೋಟಿ ರೂ.
7ನೇ ದಿನ: 12.50 ಕೋಟಿ ರೂ.
8ನೇ ದಿನ: 12.23 ಕೋಟಿ ರೂ.
9ನೇ ದಿನ: 19.50 ಕೋಟಿ ರೂ.

ಭಾರತದ ಗಲ್ಲಾಪೆಟ್ಟಿಗೆಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ ಧೂಳೆಬ್ಬಿಸಿದೆ. ವಿದೇಶದಲ್ಲೂ ತನ್ನ ಆರ್ಭಟ ಶುರುಮಾಡಿದೆ. ಅಮೆರಿಕಾ, ಆಸ್ಟ್ರೇಲಿಯಾ ಮುಂತಾದ ಕಡೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿದೆ. ಅಲ್ಲಿಯೂ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದರಿಂದ ಚಿತ್ರತಂಡಕ್ಕೆ ಖುಷಿ ಆಗಿದೆ. ವಿದೇಶದಲ್ಲಿ ಸಿನಿಮಾ ಬಿಡುಗಡೆ ಆಗಿರುವುದರಿಂದ ಹೆಚ್ಚಿನ ಜನರನ್ನು ತಲುಪಲು ಸಹಕಾರಿ ಆಗಿದೆ. ಚಿತ್ರದ ಟೋಟಲ್​ ಕಲೆಕ್ಷನ್​ ಹೆಚ್ಚುತ್ತಿದೆ.































































































error: Content is protected !!
Scroll to Top