ರಿಕ್ಷಾ ಚಾಲಕನಿಗೆ ಜೀವ ಬೆದರಿಕೆ

ಚುನಾವಣೆ ಹಿನ್ನೆಲೆಯಲ್ಲಿ ಗಲಾಟೆ

ಕಾರ್ಕಳ : ನಿಂಜೂರು ಗ್ರಾಮ ಕಲ್ಲಂಜೆ ಹೌಸ್‌ ನಿವಾಸಿ ಪಳ್ಳಿಯಲ್ಲಿ ರಿಕ್ಷಾ ಚಾಲಕರಾಗಿರುವ ರಿತೇಶ್‌ (27) ಎಂಬವರಿಗೆ ಪಳ್ಳಿ ಗ್ರಾಮದ ಚರಣ್ ಎಂಬಾತ ಜೀವ ಬೆದರಿಕೆಯೊಡ್ಡಿರುವ ಕುರಿತು ದೂರು ದಾಖಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಶನಿವಾರ ಸಂಜೆ ರಿತೇಶ್‌ ಬಾಡಿಗೆ ಬಿಟ್ಟು ಪಾತಾವು ಎಂಬಲ್ಲಿ ತಲುಪಿದಾಗ ಕಾರಿನಲ್ಲಿ ಬಂದ ಚರಣ್‌ ರಿಕ್ಷಾ ಅಡ್ಡಗಟ್ಟಿ ರಿತೇಶ್‌ ಅವರನ್ನು ನಿಂದಿಸಿ ನೀನು ಯಾರಿಗೆ ಓಟು ಹಾಕಿದ್ದಿ, ನಿನ್ನ ಅಣ್ಣ ಅನೂರ್‌ ಶೆಟ್ಟಿ ಎಲ್ಲಿದ್ದಾನೆ ಎಂದೆಲ್ಲ ಹೇಳಿ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ ಮತ್ತು ರಿಕ್ಷಾವನ್ನು ದೂಡಿ ಹಾಕಲು ಯತ್ನಿಸಿದ್ದಾನೆ ಎಂದು ರಿತೇಶ್‌ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಚರಣ್‌ ಬಿಜೆಪಿ ಕಾರ್ಯಕರ್ತ ಎನ್ನಲಾಗಿದೆ. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top