ಹೆಬ್ರಿ : ಮತ ಚಲಾಯಿಸದೇ ವಾಪಸ್‌ ತೆರಳಿದ ಮತದಾರರು

ಹೆಬ್ರಿ : ತಾಸುಗಟ್ಟೆಲೆ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ತಮ್ಮ ಹಕ್ಕು ಚಲಾಯಿಸದೇ ಮರಳಿ ಮನೆಗೆ ತೆರಳಿದ ಘಟನೆ ಹೆಬ್ರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ನಡೆದಿದೆ. ಬಿರು ಬಿಸಿಲಿಗೆ ಒಂದೂವರೆ ಗಂಟೆಗಳ ಕಾಲ ಸಾಲುದ್ದ ನಿಂತಿದ್ದ ಮತದಾರರು ಸಮಯ 12:30ಯಾಗುತ್ತಿದ್ದಂತೆ ವಾಪಸ್‌ ಮನೆಗೆ ತೆರಳಿದ್ದಾರೆ. 1250 ಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಹೆಬ್ರಿ ಸರಕಾರಿ ಶಾಲಾ ಸಖಿ ಮತಗಟ್ಟೆಯಲ್ಲಿ ಒಂದೇ ಮತಯಂತ್ರವಿತ್ತು. ಹೀಗಾಗಿ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿತ್ತು. ಇದರಿಂದ ಬೇಸತ್ತ ಮತದಾರರು ಮರಳಿ ಮನೆಗೆ ತೆರಳಿರುತ್ತಾರೆ.

ನಕ್ಸಲ್ ಬಾದಿತ ನಾಡ್ಪಾಲು ಸೋಮೇಶ್ವರ ಪೇಟೆಯ ಮತಕೇಂದ್ರದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್‌ ಕಲ್ಪಿಸಲಾಗಿತ್ತು.

ನಾಡ್ಪಾಲು ಸೋಮೇಶ್ವರ ಪೇಟೆಯ ಮತಕೇಂದ್ರ




























































































error: Content is protected !!
Scroll to Top