ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗಿನಿಂದ ನಿರರ್ಗಳವಾಗಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಸಂಜೆ 4:30 ರ ವೇಳೆಗೆ ಗುಡುಗು ಸಹಿತ ಮಳೆ ಸುರಿದಿದ್ದು ಮತದಾನ ಪ್ರಕ್ರಿಯೆ ನಡೆಯುತ್ತಲೇ ಇತ್ತು. 5 ಗಂಟೆಯ ವೇಳೆಗೆ ಶೇ. 75. 54 ಮತದಾನವಾಗಿದೆ. 75796 ಮಹಿಳೆಯರು, 68174 ಪುರುಷರು ಸೇರಿದಂತೆ ಒಟ್ಟು 143970 ಮಂದಿ ಮತದಾರರು ಮತ ಚಲಾಯಿಸಿದ್ದಾರೆ. ಮತಗಟ್ಟೆಯ ಮುಂಭಾಗದಲ್ಲಿ ಬೂತ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಕ್ಷದ ಕಾರ್ಯಕರ್ತರು ಮಳೆಯ ಸಂದರ್ಭ ಬದಿಯ ಬಸ್ಸು ತಂಗುದಾಣ, ಅಂಗಡಿ ಮುಗ್ಗಟ್ಟುಗಳಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದರು.
ಗುಡುಗಿನ ಆರ್ಭಟದೊಂದಿಗೆ ಕಾರ್ಕಳದಲ್ಲಿ 5 ಗಂಟೆಯ ವೇಳೆಗೆ ಶೇ. 75. 54 ಮತದಾನ





















