ಕಾರ್ಕಳ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಮಧ್ಯಾಹ್ನ 1 ಗಂಟೆಗೆ ಕಾರ್ಕಳಕ್ಕೆ ಆಗಮನದ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಪೊಲೀಸರು ಭಾರಿ ಭದ್ರತೆ ಕಲ್ಪಿಸಿದ್ದಾರೆ.
ಕಾರ್ಕಳ ಅನಂತಶಯನ ವೃತ್ತದಿಂದ ಶ್ರೀ ವೆಂಕಟರಮಣ ದೇವಳ ಪರಿಸರದವರೆಗೆ ಯೋಗಿಜಿ ರೋಡ್ ಶೋ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಖಾಕಿ ಪಡೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.
ಎಸ್‌ಪಿ ಹಾಕೆ ಅಕ್ಷಯ್ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದ್ದು, 500 ಮಂದಿ ಪೊಲೀಸರು, ಡಿಎಆರ್, ಕೆಎಸ್‌ಆರ್‌ಪಿ, ಸಿಐಎಸ್‌ಎಫ್ (ಕೇಂದ್ರಿಯ ಭದ್ರತಾ ಪಡೆ), ತಮಿಳುನಾಡಿನ ಸುಮಾರು 100 ಮಂದಿ ಪೊಲೀಸರು ಕರ್ತವ್ಯದಲ್ಲಿದ್ದಾರೆ.
ಉತ್ತರ ಪ್ರದೇಶದ ಪೊಲೀಸ್ ತಂಡ ಹಾಗೂ ಎನ್‌ಎಸ್‌ಜಿ ಶುಕ್ರವಾರವೇ ಕಾರ್ಕಳ ಆಗಮಿಸಿ, ಭದ್ರತಾ ಕಾರ್ಯ ಪರಿಶೀಲಿಸಿದೆ.

ಬಸ್ ಸಂಚಾರ ನಿರ್ಬಂಧ
ನಗರದ ಬಸ್ ಬಸ್ ನಿಲ್ದಾಣಕ್ಕೆ ಎಲ್ಲ ಬಸ್‌ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬಂಡಿಮಠದಲ್ಲಿ ಹಾಗೂ ಸರಕಾರಿ ಆಸ್ಪತ್ರೆ ಬಳಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ರೋಡ್ ಶೋ ನಡೆಯಲಿರುವ ಕಾರ್ಕಳ ಪೇಟೆಯಲ್ಲಿ ಬಸ್ ಸಂಚಾರವನ್ನು ನಿಷೇಧಿಸಲಾಗಿದೆ.
























