ಹೆಬ್ರಿಯಲ್ಲಿ ಕಸಾಪ 109ನೇ ಸಂಸ್ಥಾಪನಾ ದಿನಾಚರಣೆ

ದತ್ತಿ ಉಪನ್ಯಾಸ

ಹೆಬ್ರಿ : ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು. ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಆಶಾಲತಾ ದೀಪ ಬೆಳಗಿಸಿ ಉದ್ಘಾಟಿಸಿ ಕನ್ನಡ ನಮ್ಮ ಮನೆ ಮನಗಳಲ್ಲಿರಬೇಕು ಎಂದು ಶುಭ ಹಾರೈಸಿದರು. ಭುವನೇಶ್ವರಿ ದೇವಿಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕ.ಸಾ.ಪ ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ ಮುಖ್ಯ ಅಭ್ಯಾಗತರಾಗಿದ್ದರು.
“ಕನ್ನಡ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು” ವಿಷಯದ ಬಗ್ಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಭಾಷಾ ಶಿಕ್ಷಕ ಮಂಜುನಾಥ .ಕೆ. ಶಿವಪುರ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಪರಿಷತ್ತು ನೆಲ, ಜಲ ,ಸಂಸ್ಕೃತಿ, ಪುಸ್ತಕ ಪ್ರಕಟಣೆ, ಸಾಹಿತ್ಯಿಕವಾಗಿ ನಿರಂತರ ಕೆಲಸ ಮಾಡುತ್ತಿದೆ. ಕನ್ನಡ ಅಸ್ಮಿತೆ ಎಂಬುದು ನಾವು ನಮ್ಮ ಭಾಷೆ, ಸಂಸ್ಕೃತಿ, ಆಚರಣೆ ಕುರಿತು ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಸೂಚಿಸುತ್ತದೆ ಎಂದು ಹೇಳಿದರು.
ಕಿದಿಯೂರು ಗುರುರಾಜ ಭಾಗವತ ಮತ್ತು ಶಾಂತಾ ಜಿ.ಭಾಗವತ ದತ್ತಿ ಉಪನ್ಯಾಸ “ಆರೋಗ್ಯ ಮತ್ತು ಅರ್ಯುವೇದ” ಎನ್ನುವ ವಿಷಯದ ಬಗ್ಗೆ ಆರ್ಯುಭೂಮಿ ಹೆಲ್ತ್ ಕೇರ್ ಕ್ಲಿನಿಕ್ ಸಂತೆಕಟ್ಟೆಯ ಆಯುರ್ವೇದ ತಜ್ಞ ಡಾ.ಸುರೇಶ ಭಟ್ಮಾತನಾಡಿ, ನಿತ್ಯ ಮನೆಯಲ್ಲೇ ಮಾಡಿದ ಆಹಾರ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಭಾರತ ಆರ್ಯುವೇದದಲ್ಲಿ ಪ್ರಗತಿಯಲ್ಲಿದ್ದು ವಿದೇಶದವರು ಇದನ್ನು ಅನುಸರಿಸುತ್ತಿದ್ದಾರೆ. ಎಂದರು.
ಅಂಬಲಪಾಡಿ ಜಾನಕಿ ವ್ಯಾಸ ಬಲ್ಲಾಳ ದತ್ತಿ ಉಪನ್ಯಾಸ “ಆ.ಪೊಳಲಿ ಭಾಲಕೃಷ್ಣ ಶೆಟ್ಟಿ ” ಎನ್ನುವ ವಿಷಯದ ಕುರಿತು ಸರಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿಯ ಉಪನ್ಯಾಸಕ ಡಾ.ಪ್ರವೀಣ ಕುಮಾರ್ ಎಸ್.ಉಪನ್ಯಾಸ ನೀಡಿದರು.
ಕ.ಸಾ.ಪ ಪದಾಧಿಕಾರಿಗಳಾದ ವೀಣಾ ಭಟ್, ಪುಷ್ಪಾವತಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗೌರವ ಕಾರ್ಯದರ್ಶಿ ಡಾ.ಪ್ರವೀಣ್ ಕುಮಾರ್ ಎಸ್. ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹರೀಶ್ ಪೂಜಾರಿ ವಂದಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿ ವಂದನಾ ನಿರೂಪಿಸಿದರು.

















































error: Content is protected !!
Scroll to Top