ಹೆಬ್ರಿಯ ಉದ್ಯಮಿ ಲಕ್ಷ್ಮೀನಾರಾಯಣ ನಾಯಕ್‌ ಬಿಜೆಪಿ ಸೇರ್ಪಡೆ

ಹೆಬ್ರಿ : ರೈತ ಸೇವಾ ಗ್ರಾಮೋದ್ಯೋಗ ಸಂಸ್ಥೆಯ ಮಾಲಕ, ಕಾರ್ಕಳ ತಾ. ಪಂ. ಮಾಜಿ ಅಧ್ಯಕ್ಷ ದಿ. ನರಂಸಿಂಹ ನಾಯಕ್‌ ಅವರ ಪುತ್ರ ಲಕ್ಷ್ಮೀನಾರಾಯಣ ನಾಯಕ್‌ ಬಿಜೆಪಿ ಸೇರ್ಪಡೆಗೊಂಡರು. ಕನ್ಯಾನ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ಮತ್ತು ಹೆಬ್ರಿ ತಾಲೂಕು ರಿಕ್ಷಾ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀನಾರಾಯಣ ನಾಯಕ್‌ ಅವರು ಅರುಣ್‌ ಶೆಟ್ಟಿ, ಪ್ರವೀಣ್ ಪೂಜಾರಿ, ಜಯಾನಂದ ಕುಲಾಲ್‌ ಮತ್ತು ಕಾರ್ತಿಕ್‌ ಸೇರಿದಂತೆ ತಮ್ಮ ಬೆಂಬಲಿಗರೊಂದಿಗೆ ಎ. 28 ರಂದು ವಿಕಾಸ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಗೊಂಡರು. ಸಚಿವ ವಿ. ಸುನಿಲ್ ಕುಮಾರ್‌, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್‌ ನಾಯಕ್‌, ಹೆಬ್ರಿ ಶಕ್ತಿ ಕೇಂದ್ರದ ಅಧ್ಯಕ್ಷ ರಮೇಶ್‌ ಕುಮಾರ್‌ ಶಿವಪುರ, ಜಿ. ಪಂ. ಮಾಜಿ ಸದಸ್ಯೆ ಜ್ಯೋತಿ ಹರೀಶ್‌, ಪಕ್ಷದ ಪ್ರಮುಖರಾದ ದಿನೇಶ್‌ ಪೈ, ಗುರುದಾಸ್‌ ಶೆಣೈ ಮೊದಲಾದವರು ಉಪಸ್ಥಿತರಿದ್ದರು.





































































































































error: Content is protected !!
Scroll to Top