ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಪದಗ್ರಹಣ ಸಮಾರಂಭ : ಅಧ್ಯಕ್ಷರಾಗಿ ನಳಿನಿ ವಿಜೇಂದ್ರ, ಕಾರ್ಯದರ್ಶಿಯಾಗಿ ಗೀತಾ ಚಂದ್ರ

ಕಾರ್ಕಳ : ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನೂತನ ಅಧ್ಯಕ್ಷರಾಗಿ ನಳಿನಿ ವಿಜೇಂದ್ರ, ಕಾರ್ಯದರ್ಶಿಯಾಗಿ ಗೀತಾ ಚಂದ್ರ ಅವರು ಅಧಿಕಾರ ಸ್ವೀಕರಿಸಿದರು. ಏ. 28ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಪದಗ್ರಹಣ ಸಮಾರಂಭ ನಡೆಯಿತು. ಉಪಾಧ್ಯಕ್ಷರಾಗಿ ಕವಿತಾ ಹರೀಶ್‌, ಕೋಶಾಧಿಕಾರಿಯಾಗಿ ಜ್ಯೋತಿ ರಮೇಶ್‌, ಜೊತೆ ಕಾರ್ಯದರ್ಶಿಯಾಗಿ ಮಲ್ಲಿಕಾ ಗಣೆಶ್‌ ಮತ್ತು ಜೊತೆ ಕೋಶಾಧಿಕಾರಿಯಾಗಿ ಪೂರ್ಣಿಮಾ ಜಯಂತ್‌ ಅಧಿಕಾರ ವಹಿಸಿಕೊಂಡರು.

ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ರವಿ, ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಡಾ. ನಯನ ಹರೀಶ್‌, ದೇವಸ್ಥಾನದ ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ್‌ ಆಚಾರ್ಯ ನಿಟ್ಟೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಲ್ಲಿಕಾ ಗಣೇಶ್‌ ಪ್ರಾರ್ಥಿಸಿ, ಜ್ಯೋತಿ ರಮೇಶ್‌ ಸ್ವಾಗತಿಸಿದರು. ಗೀತಾ ಚಂದ್ರ ನಿರೂಪಿಸಿ, ಕವಿತಾ ಹರೀಶ್‌ ವಂದಿಸಿದರು.

































































error: Content is protected !!
Scroll to Top