ಹೆಬ್ರಿ : ಹೆಬ್ರಿ ಬಸ್ ನಿಲ್ದಾಣದಲ್ಲಿ ಏ.8 ರಂದು ಸಂಜೆ ನಡೆದ ಚುನಾವಣಾ ಪ್ರಚಾರ ಭಾಷಣದಲ್ಲಿ ಪ್ರಮೋದ್ ಮುತಾಲಿಕ್ ಕಬ್ಬಿನಾಲೆ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರು ಕಾಡು ಜನರು. ಪೂರ್ತಿಯಾಗಿ ಹಾಕಿಕೊಳ್ಳಲಿಕ್ಕೆ ಬಟ್ಟೆ ಇಲ್ಲ ಎಂದು ದಲಿತ ಸಮಾಜದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ. ಪರಿಶಿಷ್ಟ ಜಾತಿ, ಪಂಗಡದ ದೌರ್ಜನ್ಯ ಪ್ರತಿರೋಧ ಕಾಯ್ದೆಯನ್ವಯ, ದಲಿತ ಜನಾಂಗದವರಿಗೆ ಅವಹೇಳನಕಾರಿಯಾಗಿ ಮಾತನಾಡಿದ ಪ್ರಮೋದ್ ಮುತಾಲಿಕ್ ಮತ್ತು ಕಾರ್ಯಕ್ರಮವನ್ನು ಆಯೋಜಿಸಿದ ಹರೀಶ್ ಅಧಿಕಾರಿ, ವಿವೇಕಾನಂದ ಶೆಣೈ, ದಿವ್ಯ ನಾಯಕ್, ಪ್ರವೀಣ ಕಾಂತರಗೋಳಿ ಮತ್ತು ಸುಭಾಷ್ ಚಂದ್ರ ಹೆಗ್ಡೆಯವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಮಲೆಕುಡಿಯ ಜನಾಂಗದ ನಿಯೋಗ ಹೆಬ್ರಿ ಠಾಣೆಗೆ ದೂರು ಆಗ್ರಹಿಸಿದೆ.
ಪ್ರಮೋದ್ ಮುತಾಲಿಕ್ ವಿರುದ್ಧ ಮಲೆಕುಡಿಯ ಸಮುದಾಯದಿಂದ ಹೆಬ್ರಿ ಠಾಣೆಗೆ ದೂರು































