ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ 2022-23ರ ದ್ವಿತೀಯ ಪಿ.ಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 99.49 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗ ವಿದ್ಯಾರ್ಥಿಗಳಾದ ಸಿರಿ ಎಸ್. 592 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಪಡೆದಿರುತ್ತಾರೆ. ಸಾನ್ವಿ ನಾಯಕ್ 590 ಅಂಕ ಪಡೆದು 8ನೇ ಸ್ಥಾನವನ್ನು ಹಾಗೂ ಅನ್ವಿತಾ ಶೆಟ್ಟಿ 589 ಅಂಕದೊಂದಿಗೆ 9ನೇ ಸ್ಥಾನವನ್ನು ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ 108 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅಕ್ಷತಾ 591 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನಿಯಾಗಿರುತ್ತಾರೆ. ಗಣಿತ ಶಾಸ್ತ್ರದಲ್ಲಿ- 4, ಭೌತಶಾಸ್ತ್ರದಲ್ಲಿ-2, ಗಣಕ ವಿಜ್ಞಾನದಲ್ಲಿ-9, ಲೆಕ್ಕ ಶಾಸ್ತ್ರ -16, ಸಂಸ್ಕøತ- 15, ವ್ಯವಹಾರ ಅಧ್ಯಾಯನ -8, ಸಂಖ್ಯಾಶಾಸ್ತ್ರ-7, ಕನ್ನಡ-4 ವಿದ್ಯಾರ್ಥಿಗಳು ವಿಷಯವಾರು ಪೂರ್ಣಾಂಕ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವೃಂದದವರು, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.
ಅಮೃತ ಭಾರತಿಯ ನಾಲ್ವರು ವಿದ್ಯಾರ್ಥಿನಿಯರಿಗೆ ರ‍್ಯಾಂಕ್
























