ಮೊಯ್ಲಿ, ಭಂಡಾರಿ ರೋಲ್‌ ಮಾಡೆಲ್‌: ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ

ಚುನಾವಣೆ ಎದುರಿಸುವ ಸಿದ್ಧತೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ

ಕಾರ್ಕಳ : ಕಾಂಗ್ರೆಸ್ ನಾಯಕರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ದಿ. ಗೋಪಾಲ ಭಂಡಾರಿಯವರೇ ನಮಗೆ ರೋಲ್‌ ಮಾಡೆಲ್‌. ಹಿರಿಯ ಕಾಂಗ್ರೆಸ್ಸಿಗರ ಆದರ್ಶ ತತ್ವಗಳ ಪರಿಪಾಲನೆ, ಸಲಹೆ ಸೂಚನೆಗಳಿಂದ ಈ ಬಾರಿ ಚುನಾವಣೆಯನ್ನು ಎದುರಿಸೋಣ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿಯಾಲು ಉದಯ್‌ ಕುಮಾರ್‌ ಶೆಟ್ಟಿ ಹೇಳಿದರು. ಶನಿವಾರ ತಾಲೂಕು ಕಚೇರಿ ಬಳಿಯಿರುವ ತಮ್ಮ ಹೊಸ ಕಚೇರಿಗೆ ಭೇಟಿ ನೀಡಿದ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಮಗ್ರ ಅಭಿವೃದ್ಧಿ ಮೂಲಮಂತ್ರ
ನನ್ನ ಪರಿವಾರದಲ್ಲಿ ಯಾರೂ ರಾಜಕಾರಣದಲ್ಲಿಲ್ಲ. ಈಗ ನನಗೆ ಅವಕಾಶ ದೊರೆತಿದ್ದು, ನಿಮ್ಮೆಲ್ಲರ ಸಹಕಾರದೊಂದಿಗೆ ಕಾರ್ಕಳದ ಅಭಿವೃದ್ಧಿಗಾಗಿ ಶ್ರಮಿಸುವ ಭಾಗ್ಯ ನನ್ನದಾಗಿದೆ. ಪಕ್ಷದ ಗ್ಯಾರಂಟಿ ಕಾರ್ಡ್‌ ಯೋಜನೆಯ ಸದುಪಯೋಗವನ್ನು ಜನತೆಗೆ ತಿಳಿಸಿ, ತನ್ಮೂಲಕ ಈ ಬಾರಿ ಪಕ್ಷವನ್ನು ಅಧಿಕಾರಕ್ಕೆ ಬರುವಂತೆ ಮಾಡಬೇಕು. ಇದಕ್ಕಾಗಿ ಕಾರ್ಯಕರ್ತರೆಲ್ಲರೂ ಒಗ್ಗಟಿನಿಂದ ಕಾರ್ಯ ನಿರ್ವಹಿಸಬೇಕು. ಭಯಮುಕ್ತ ಮತ್ತು ಸೌಹಾರ್ದ ಕಾರ್ಕಳ ನಿರ್ಮಾಣಕ್ಕಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಮ್ಮ ಮೂಲಮಂತ್ರವಾಗಬೇಕು ಎಂದರು.

ಟೆಂಪಲ್‌ ರನ್‌
ಇದಕ್ಕೂ ಮೊದಲು ಕಾರ್ಕಳ ವೆಂಕಟರಮಣ ದೇವಸ್ಥಾನ, ಮುಂಡ್ಕೂರು ಜಾರಿಗೆಕಟ್ಟೆ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.









































































































error: Content is protected !!
Scroll to Top