ಮೀನು ಹಿಡಿಯಲು ಹೋದ ವ್ಯಕ್ತಿ ಮುಳುಗಿ ಸಾವು

ಅಜೆಕಾರು: ಶಿರ್ಲಾಲು ಸಮೀಪ ಮದಿಮಲು ಗುಂಡಿಗೆ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ಸಂಭವಿಸಿದೆ. ಕೆರ್ವಾಶೆ ಮಂಗಳ ನಗರದ ನಿವಾಸಿ ಚಂದ್ರ ದೇವಾಡಿಗ (55) ಮೃತಪಟ್ಟವರು. ಶಿರ್ಲಾಲು ಗ್ರಾಮದ ಮುಂಡೇಜಾಲು ಮನೆಯ ಶ್ರೀಧರ ಎಂಬವರು ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದ ಕೆರ್ವಾಶೆಯ ದೀಕ್ಷಿತ್‌ ಎಂಬವರು ತನ್ನ ಜತೆ ಬಂದಿದ್ದ ಚಂದ್ರ ದೇವಾಡಿಗ ಎಂಬವರು ಮೀನು ಹಿಡಿಯಲು ಬಲೆ ಹಾಕಿದ್ದು, ಬಲೆಯಲ್ಲಿ ಮೀನು ಬಿದ್ದಿದೆಯ ಎಂದು ನೋಡಲು ಈಜುತ್ತಾ ಹೋದವರು ವಾಪಸು ಬಂದಿಲ್ಲ ಎಂದು ತಿಳಿಸಿದರು. ಶ್ರೀಧರ ಅಲ್ಲಿಗೆ ಹೋಗಿ ನೋಡಿದಾಗ ಚಂದ್ರ ದೇವಾಡಿಗ ಎಲ್ಲೂ ಕಾಣಿಸಲಿಲ್ಲ. ನಂತರ ಮುಳುಗು ತಜ್ಞರನ್ನು ಕರೆಸಿ ಹುಡುಕಿದಾಗ ಚಂದ್ರ ದೇವಾಡಿಗರ ಶವ ಪತ್ತೆಯಾಗಿದೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















































error: Content is protected !!
Scroll to Top