ಸ್ವಚ್ಛ ಕಾರ್ಕಳ ಬ್ರಿಗೇಡ್ – ಸ್ವಚ್ಛ ಮಾರ್ಗಮ್ ನಮ್ಮ ರಸ್ತೆ-ಸ್ವಚ್ಛ ರಸ್ತೆ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್ ಸ್ವಚ್ಛ ಮಾರ್ಗಮ್ ನಮ್ಮ ರಸ್ತೆ -ಸ್ವಚ್ಛ ರಸ್ತೆ ಎಂಬ ಶ್ಲೋಘನ್‌ನೊಂದಿಗೆ ಏ.9ರಂದು ಬೆಳಗ್ಗೆ 6.30ರಿಂದ8.30 ವರೆಗೆ, ಶಿವತಿಕೆರೆ ಭಾಗದ ಹೆದ್ದಾರಿ ಸ್ವಚ್ಛತಾ ಕಾರ್ಯ ನಡೆಯಿತು. ತಂಡದ ಸದಸ್ಯರಾದ ಶ್ರೀನಿವಾಸ ಸುದಾಳ, ಸುದರ್ಶನ ಭಂಡಾರಿ ಮತ್ತು ಸುರೇಶ್ ನಾಯಕ್ ಅವರ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯವು ನಡೆದಿದ್ದು ಇವರೊಂದಿಗೆ, ಶಿವತಿಕೆರೆ ಉಮಾಮಹೇಶ್ವರಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ನಾಗೇಶ್ ದೇವಾಡಿಗ, ಕಾರ್ಯದರ್ಶಿ ರೂಪೇಶ್ ದೇವಾಡಿಗ ಮತ್ತು ಸದಸ್ಯರು, ಚೇತಕ್ ಯುವತಿ ಮಂಡಲದ ಅಧ್ಯಕ್ಷೆ ರೇಷ್ಮಾ ಮತ್ತು ಚೇತಕ್ ಯುವಕ ಮಂಡಲದ ಕಾರ್ಯದರ್ಶಿ ಸುದರ್ಶನ್ ಮತ್ತು ಸದಸ್ಯರು, ನಿವೃತ್ತ ಪ್ರಾಂಶುಪಾಲ ಗಣೇಶ್ ಬರ್ಲಾಯ ಮತ್ತು ಎಂಐಟಿ ಕಾಲೇಜಿನ ಉಪನ್ಯಾಸಕ ಕೃಷ್ಣಮೂರ್ತಿ ರಾವ್, ಕೃಷ್ಣಾನಂದ ಪೈ, ಗಾಯತ್ರಿ ಕೃಷ್ಣಮೂರ್ತಿ ರಾವ್, ಪ್ರಮೀಳಾ ಶ್ರೀನಿವಾಸ್, ಸ್ವಚ್ಛ ಕಾರ್ಕಳ ಬ್ರಿಗೇಡ್ ಸದಸ್ಯರುಗಳು ಮತ್ತು 35ಕ್ಕಿಂತ ಅಧಿಕ ಸ್ವಯಂಸೇವಕರು ಈ ಅಭಿಯಾನದಲ್ಲಿ ಭಾಗವಹಿಸಿ, ರಸ್ತೆ ಬದಿಯಲ್ಲಿ ಮತ್ತು ಚರಂಡಿಗಳಲ್ಲಿ ಬಿಸಾಡಿದ ಕಸಗಳನ್ನು ಸ್ವಚ್ಛ ಮಾಡಲು ಸಹಕರಿಸಿದರು.





























































































































error: Content is protected !!
Scroll to Top