ಮಟ್ಕಾದಲ್ಲಿ ನಿರತನಾಗಿದ್ದ ವ್ಯಕ್ತಿಯ ಬಂಧನ

ಹೆಬ್ರಿ : ಮುದ್ರಾಡಿ ಪೇಟೆಯ ಆಟೋರಿಕ್ಷಾ ನಿಲ್ದಾಣ ಬಳಿ ಮಟ್ಕಾ ಜೂಜಾಟದಲ್ಲಿ ನಿರತನಾಗಿದ್ದ ವ್ಯಕ್ತಿಯನ್ನು ಹೆಬ್ರಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾ. 29ರಂದು ವರಂಗ ಗ್ರಾಮದ ದಿನೇಶ ದೇವಾಡಿಗ (42) ಎಂಬಾತ ಮಟ್ಕಾದಲ್ಲಿ ನಿರತನಾಗಿರುವ ಕುರಿತು ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸ್‌ ಠಾಣೆ ಎಸ್‌ಐ ನಂದಕುಮಾರ್‌ ಎಂ.ಎಂ. ಮತ್ತವರ ತಂಡ ದಾಳಿ ನಡೆಸಿ ಆತನಲ್ಲಿದ್ದ 1, 520 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜೆಕಾರು : ಆಕಸ್ಮಿಕವಾಗಿ ಕೆರೆಗೆ ಬಿದ್ದು ಮಹಿಳೆ ಸಾವು

ಅಜೆಕಾರು : ಮಹಿಳೆಯೋರ್ವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಅಸುನೀಗಿದ ಘಟನೆ ಮಾ. 29ರಂದು ಶಿರ್ಲಾಲು ಗ್ರಾಮದಲ್ಲಿ ನಡೆದಿದೆ. ಶಿರ್ಲಾಲು ಗ್ರಾಮದ ಸೂರೋಳ್‌ ಮನೆ ಸೊಲ್ಮಾ (77) ಎಂಬವರೇ ಕೆರೆಗೆ ಬಿದ್ದು ಸಾವಿಗೀಡಾದ ದುರ್ದೈವಿ.
ಸೊಲ್ಮಾ ಅವರು ದನಗಳನ್ನು ಮೇಯಲು ಕಟ್ಟಲು ಹೋದವರು ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಿದಾಗ ಸೊಲ್ಮಾ ಅವರು ಕೆರೆಗೆ ಬಿದ್ದು ಒದ್ದಾಡುತ್ತಿರುವುದು ಕಂಡಿತು. ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಚಿಕಿತ್ಸೆಗೆ ಕರೆದುಕೊಂಡು ಹೋಗುವ ವೇಳೆ ಸೊಲ್ಮಾ ಅವರು ಮೃತಪಟ್ಟಿರುತ್ತಾರೆ. ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಮೊಯ್ದಿನಬ್ಬ ಪ್ರಕರಣ ದಾಖಲಿಸಿರುತ್ತಾರೆ.





























































































































error: Content is protected !!
Scroll to Top