ಕಾರ್ಕಳ : ಕರ್ನಾಟಕ ಸರಕಾರ ವಿದ್ಯುತ್ ಪ್ರಸರಣ ನಿಗಮದ ಸಿಬ್ಬಂದಿಗಳಿಗೆ ವೇತನ ಪರಿಷ್ಕರಣೆ ಮಾಡಿದ ಹಿನ್ನೆಲೆಯಲ್ಲಿ ಕೆಇಬಿಇಎ ಒಕ್ಕೂಟದ ವತಿಯಿಂದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಮಾ.21ರಂದು ಕಾರ್ಕಳ ವಿಕಾಸ ಕಚೇರಿಯಲ್ಲಿ ಸುನೀಲ್ ಕುಮಾರ್ ಅವರನ್ನು ಒಕ್ಕೂಟದ ಪದಾಧಿಕಾರಿಗಳು ಅಭಿನಂದಿಸಿದರು.

ಕವಿಪ್ರನಿ ಹಾಗೂ ಎಲ್ಲ ವಿಸಕಂಗಳ ಅಧಿಕಾರಿ / ನೌಕರರಿಗೆ 2022 ಎ. 1ರಿಂದ ಪೂರ್ವಾನ್ವಯವಾಗುವಂತೆ ಸರಕಾರ ಮೂಲ ವೇತನದ ಮೇಲೆ 20 ಶೇ. ಹೆಚ್ಚಿಸಿತ್ತು. ಕವಿಪ್ರನಿ ಅಧಿಕಾರಿ/ನೌಕರರ ಒಕ್ಕೂಟದ ಅಧ್ಯಕ್ಷ ಲಕ್ಷ್ಮೀಪತಿ ಎಂ., ಪ್ರಧಾನ ಕಾರ್ಯದರ್ಶಿ ಶಿವಣ್ಣ, ಕವಿಪ್ರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಲರಾಮ್, ಸುಧಾಕರ ರೆಡ್ಡಿ, ರಾಜಾ ನಾಯ್ಕ್, ರವಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಈ ವೇಳೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ನಿಗಮದ ಪ್ರತಿಯೊಬ್ಬ ಉದ್ಯೋಗಿಯೂ ಪ್ರಾಮಾಣಿಕತೆ, ದಕ್ಷತೆ ಜನಪರವಾಗಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಬೇಕೆಂದರು. ಅಸೂಟಿ ಹಾಗೂ ನಿಗಮದ ಅಧಿಕಾರಿ, ನೌಕರರು ಈ ಸಂದರ್ಭದಲ್ಲಿ ಹಾಜರಿದ್ದರು.

























