ಕಾರ್ಕಳ : ಶ್ರೀ ಬ್ರಹ್ಮಶ್ರೀ ಮುಗೇರ ದೈವಸ್ಥಾನ ದುರ್ಗದಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ವಿನೋದಾವಳಿ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಖ್ಯಾತ ಸಾಹಿತಿ ಸಾವಿತ್ರಿ ಮನೋಹರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಾಂಸ್ಕೃತಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೀ ಎಸ್. ಪಾಠಕ್ ವಹಿಸಿದ್ದು, ವೇದಿಕೆಯಲ್ಲಿ ಶ್ರೀ ಬ್ರಹ್ಮಶ್ರೀ ಮುಗೇರ ದೈವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಾಯ ಪಾಠಕ್ ಅರ್ಬಿ, ಕೊಡುಗೈ ದಾನಿ ಸುದರ್ಶನ ಚಿಪ್ಳೂಣ್ಕರ್, ದೈವಸ್ಥಾನದ ಗುರಿಕಾರ ಸಂಜೀವ ಕೆ., ಅಣ್ಣಿ ನಾರ್ಕಟ್, ಪ್ರೇಮಾ ನಾರ್ಕಟ್, ದೈವಸ್ಥಾನದ ಪ್ರಧಾನ ಅರ್ಚಕ ರಮೇಶ್ ಅಂಬಡೆಮಾರು, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಕಿಟ್ಟ ಕಾಡಂಬಳ, ಸಮಿತಿಯ ಗೌರವಾಧ್ಯಕ್ಷ ಶೇಖರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಮುದಾಯದ ಮಕ್ಕಳು ಹಾಗೂ ಮಹಿಳೆಯರಿಂದ ವಿವಿಧ ವಿನೋದಾವಳಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮುದಾಯದ ಕಿರಿಯ-ಹಿರಿಯ ಮಕ್ಕಳಿಗೆ ಸುವರ್ಣ ಚಿಪ್ಳೊಣ್ಕರ್ ಮತ್ತು ಸುದರ್ಶನ್ ಚಿಪ್ಳೊಣ್ಕರ್ ಪಾಜಿನಡ್ಕ ನಗದು ರೂಪದ ಪ್ರೋತ್ಸಾಹ ಧನವನ್ನು ವಿತರಿಸಿದರು. ಶ್ರೀ ಬ್ರಹ್ಮಶ್ರೀ ಮುಗೇರ ಮಹಿಳಾ ಮಂಡಳಿಯ ಅಧ್ಯಕ್ಷೆ ವಸಂತಿ ಜಯ ಕಾಡಂಬಳ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಯನ ಅಂಬಡೆಮಾರು ಸ್ವಾಗತಿಸಿ, ಪ್ರತಿಮಾ ದೇವದಾಸ್ ನಿರೂಪಿಸಿ ವಂದಿಸಿದರು.

























