ಛಾಯಾಚಿತ್ರಗ್ರಾಹಕ ಜಿನೇಶ್‌ ಪ್ರಸಾದ್‌ಗೆ ಚಿತ್ರಾಂಜಲಿ ರಾಷ್ಟ್ರೀಯ ಫೋಟೊಗ್ರಫಿ ಅವಾರ್ಡ್‌

250ಕ್ಕೂ ಅಧಿಕ ಪ್ರಶಸ್ತಿಗಳಿಗೆ ಪಾತ್ರರಾದ ಕಾರ್ಕಳದ ನೆಲ್ಲಿಕಾರಿನ ಜಿನೇಶ್‌ ಪ್ರಸಾದ್‌

ಹೊಸದಿಲ್ಲಿ : ಚಿತ್ರಾಂಜಲಿ ರಾಷ್ಟ್ರೀಯ ಫೋಟೊಗ್ರಫಿ ಸ್ಪರ್ಧೆಯಲ್ಲಿ ಪೊರ್ಲು ಖ್ಯಾತಿಯ ಅಂತಾರಾಷ್ಟ್ರೀಯ ಛಾಯಾಚಿತ್ರಗ್ರಾಹಕ ಜಿನೇಶ್‌ ಪ್ರಸಾದ್‌ ಅವರು ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದು ಮಾ.19ರಂದು ದೆಹಲಿಯ ಜನ್‌ಪಥ್‌ನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಸಿಂಗ್‌ ಪಟೇಲ್‌ 1 ಲಕ್ಷ ರೂ. ನಗದಿನೊಂದಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಮೂಲತಃ ಕಾರ್ಕಳ ತಾಲೂಕಿನ ನೆಲ್ಲಿಕಾರು ನಿವಾಸಿಯಾಗಿರುವ ಜಿನೇಶ್‌ ಪ್ರಸಾದ್‌ ಅವರು ಕಳೆದ 3 ದಶಕಗಳಿಂದ ಛಾಯಾಚಿತ್ರಗ್ರಾಹಕರಾಗಿ, ಕಲಾತ್ಮಕ, ಸೃಜನಶೀಲ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಖ್ಯಾತರಾದವರು. ಇವರ ಕೈ ಚಳಕಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ 250ಕ್ಕೂ ಅಧಿಕ ಪ್ರಶಸ್ತಿಗಳು ಬಂದಿವೆ.
ಇವರ ಅನೇಕ ಆಕರ್ಷಕ ಛಾಯಾಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಂಬಳ, ಮಹಾಮಸ್ತಕಾಭಿಷೇಕ, ಕುಂಭಮೇಳ, ನೇಮೋತ್ಸವ, ನಡಾವಳಿ ಸಂದರ್ಭ ಇವರು ಕ್ಲಿಕ್ಕಿಸಿದ ಚಿತ್ರಗಳು ಪ್ರಸಿದ್ಧಿ ಪಡೆದಿವೆ.
ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದಿಂದ ಕೂಡ ಮಾಡುವ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ ಚಿತ್ರಾಂಜಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಕನ್ನಡಿಗ ಜಿನೇಶ್ ಪ್ರಸಾದ್ ಅವರಿಗೆ ಅತ್ಯುನ್ನತ ಪ್ರಶಸ್ತಿ ಪುರಸ್ಕಾರ ಕೊಡಲಾಗಿದೆ.





























































































































error: Content is protected !!
Scroll to Top