ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶ ಮಂಗಳವಾರ ಸಮಾಪನಗೊಂಡಿತು. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಭಕ್ತರಿಂದ ಭಾರಿ ಪ್ರಮಾಣದಲ್ಲಿ ಹೊರೆ ಕಾಣಿಕೆ ಸಲ್ಲಿಕೆಯಾಗಿದ್ದು, ಹೊರೆಕಾಣಿಕೆಯಲ್ಲಿ ಉಳಿದ ಅಕ್ಕಿ, ತರಕಾರಿ, ಸಾಮಗ್ರಿಗಳನ್ನು ಜೀರ್ಣೋದ್ಧಾರ ಸಮಿತಿಯು ಬುಧವಾರ ವಿವಿಧ ಶಾಲೆ, ಅನಾಥಾಶ್ರಮಗಳಿಗೆ ನೀಡಿದೆ. ಉಡುಪಿ ಜಿಲ್ಲೆಯ 5 ವಿಶೇಷ ಶಾಲೆಗಳು ಹಾಗೂ 10 ಅನಾಥಾಶ್ರಮಗಳಿಗೆ ತಲಾ 300 ಕೆ.ಜಿ. ಅಕ್ಕಿ, 25 ಕೆ. ಜಿ. ಬೆಲ್ಲ, ತರಕಾರಿ, ಅಡುಗೆ ಸಾಮಗ್ರಿಗಳನ್ನು ನೀಡುವ ಮೂಲಕ ಬಡವರು, ಅಶಕ್ತರ ಪಾಲಿಗೆ ಜೀರ್ಣೋದ್ಧಾರ ಸಮಿತಿಯು ನೆರವಾಗಿದೆ.




















