ಕ್ವಾರಿ ಓನರ್ಸ್‌ ಅಸೋಸಿಯೇಶನ್ ವತಿಯಿಂದ ಸಿಎಂ ಭೇಟಿ

ಗಣಿಗಾರಿಕೆಯಲ್ಲಿನ ತೊಡಕು ನಿವಾರಣೆ – ರವೀಂದ್ರ ಶೆಟ್ಟಿ ಬಜಗೋಳಿ

ಕಾರ್ಕಳ : ಕಾನೂನುಬದ್ಧ ಗಣಿಗಾರಿಕೆಯಲ್ಲಿನ ತೊಡಕುಗಳನ್ನು ಸರಕಾರ ಇದೀಗ ನಿವಾರಣೆ ಮಾಡಿದೆ ಎಂದು ಕರ್ನಾಟಕ ಫೆಡರೇಷನ್ ಆಫ್ ಕ್ವಾರಿ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದರು.
ಗಣಿಗಾರಿಕೆಯ ನಿಯಮಗಳಲ್ಲಿನ ತೊಡಕನ್ನು ನಿವಾರಿಸುವಂತೆ ಕಳೆದ ಒಂದು ವರ್ಷದಿಂದ ಅಸೋಸಿಯೇಶನ್‌ ಹೋರಾಟ ಮಾಡಿಕೊಂಡು ಬಂದಿದ್ದು, ಕಲ್ಲು ಗಣಿಗಾರಿಕೆಯ ಸಮಸ್ಯೆ ಹೋಗಲಾಡಿಸುವಂತೆ ಸಿಎಂ ಅವರಿಗೂ ಮನವಿ ಸಲ್ಲಿಸಲಾಗಿತ್ತು. ಇದೀಗ ನಮ್ಮ ಹೋರಾಟದ ಫಲ ಎಂಬಂತೆ ಮಾ. 8ರಂದು ಸರಕಾರ ಸಂಪುಟದಲ್ಲಿ ಹೊಸ ನೀತಿಗೆ ಅನುಮೋದನೆ ನೀಡಿದೆ. ಇದರಿಂದ ಕಟ್ಟಡ ನಿರ್ಮಾಣಕ್ಕೆ ಪೂರಕ ಅಂಶಗಳು ಇರಲಿದ್ದು, ಗಣಿಗಾರಿಕೆಯಿಂದ ಪ್ರಸ್ತುತ ಸರಕಾರಕ್ಕೆ ದೊರೆಯುವ ರಾಯಧನ ಮೂರು ಪಟ್ಟು ಹೆಚ್ಚಾಗಲಿದೆ ಎಂದವರು ತಿಳಿಸಿದರು.













































error: Content is protected !!
Scroll to Top