ಸಣ್ಣ ಸಮುದಾಯಗಳ ಹಿತರಕ್ಷಣೆಗೆ ಆದ್ಯತೆ ನೀಡುವಂತೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ

ಕಾರ್ಕಳ : ನಾಡಿನಾದ್ಯಂತ ನೂರಾರು ಸಣ್ಣ ಪುಟ್ಟ ಸಮುದಾಯಗಳಿದ್ದು ಆ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಉದ್ಯೋಗದ ಹಕ್ಕು, ರಾಜಕೀಯ ಹಕ್ಕುಗಳ‌ ಹಿತರಕ್ಷಣೆ ಕಾಯುವ ನಿಟ್ಟಿನಲ್ಲಿ ಧನಾತ್ಮಕ ವರದಿ ನೀಡುವಂತೆ ಹಿಂದುವಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆಯವರಿಗೆ ನ್ಯಾಯವಾದಿ ಎಂ.ಕೆ. ಸುವ್ರತ್ ಕುಮಾರ್ ನೇತೃತ್ವದ ನಿಯೋಗ ಒತ್ತಾಯಿಸಿತು. ರಾಜ್ಯದ ಪ್ರಭಾವಿ‌ ಹಾಗೂ ಪ್ರಮುಖ ಸಮುದಾಯಗಳು ಸಾಂಖ್ಯಿಕ ಬಲ‌, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ಆಧಾರದಲ್ಲಿ ತಮ್ಮ ತಮ್ಮ ಸಮುದಾಯಗಳ‌ ಹಿತರಕ್ಷಣೆಯ ಬೇಡಿಕೆ ಇಟ್ಟಿರುವುದು ನ್ಯಾಯಸಮ್ಮತವಾಗಿರುತ್ತದೆ. ಆದರೆ, ಈ ನಡುವೆ ರಾಜ್ಯದಲ್ಲಿ ನೂರಾರು ವರ್ಷಗಳಿಂದ ನೆಲೆ ನಿಂತಿರುವ ಸಣ್ಣ ಪುಟ್ಟ ಸಮುದಾಯಗಳ ಹಿತರಕ್ಷಣೆ, ಸಾಮಾಜಿಕ ಸಮತೋಲನದ ದ್ರಷ್ಟಿಯಿಂದ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ತಮ್ಮ ಹಕ್ಕುಗಳ ಹಿತರಕ್ಷಣೆಯನ್ನು ಪ್ರತಿಪಾದಿಸಲು ಅಗತ್ಯವಾಗಿರುವ ಸಾಂಖ್ಯಿಕ ಬಲವಾಗಲಿ, ಪ್ರಭಾವವಾಗಲಿ ಇಲ್ಲದಿರುವ ಈ ಸಮುದಾಯಗಳ ಜನರ ಸಾಮಾಜಿಕ, ಆರ್ಥಿಕ, ರಾಜಕೀಯ ಉನ್ನತೀಕರಣಕ್ಕಾಗಿ ಹಿಂದುಳಿದ ವರ್ಗಗಳ ಆಯೋಗ ತಮ್ಮ ವರದಿಯಲ್ಲಿ ಸೂಕ್ತ ಶಿಫಾರಸು ಮಾಡಬೇಕಾಗಿ‌‌ ನ್ಯಾಯವಾದಿ ಎಂ.ಕೆ. ಸುವ್ರತ್ ಕುಮಾರ್ ಆಗ್ರಹಿಸಿದರು.
ಕ್ಷತ್ರಿಯ ಮರಾಠ ಪರಿಷತ್‌ ನ ಬಹುಕಾಲದ ಬೇಡಿಕೆಯಾದ ಪ್ರವರ್ಗ 3ಬಿಯಿಂದ ಪ್ರವರ್ಗ 2ಎಗೆ ಸೇರ್ಪಡೆಗೊಳಿಸುವಂತೆ ಕ್ಷತ್ರೀಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಮನವಿ ಮಾಡಿಕೊಂಡರು. ಹೆಬ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಶಿವಪುರ, ವಕೀಲರಾದ ಪಾರಿತೋಷ್, ಕ್ಷತ್ರೀಯ ಮರಾಠ ಪರಿಷತ್‌ನ ಜಿಲ್ಲಾ ಗೌರವಾಧ್ಯಕ್ಷ ದಯಾನಾಥ ಜಿ. ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top