ಮಂಗಳೂರು : ಮಂಗಳೂರು ಏರ್‌ಪೋರ್ಟ್‌ನಲ್ಲಿ ವರ್ಷದ ಆರಂಭದಲ್ಲೇ ಕೋಟ್ಯಂತರ ಮೌಲ್ಯದ ಚಿನ್ನ ಕಳ್ಳಸಾಗಣೆ ಪತ್ತೆಯಾಗಿದ್ದು, ಕೇವಲ 18 ದಿನಗಳಲ್ಲಿ ಬರೋಬ್ಬರಿ 2.01 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ. 1 ರಿಂದ 18ರವರೆಗೆ ವಿವಿಧ ಪ್ರಕರಣಗಳಲ್ಲಿ ಒಟ್ಟು 2,01,69,800 ರೂ. ಮೌಲ್ಯದ 3,677 ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದುಬೈ ಮತ್ತು ಅಬುಧಾಬಿಯಿಂದ ಆಗಮಿಸಿದ ಎಂಟು ಮಂದಿ ಪ್ರಯಾಣಿಕರು ವಿವಿಧ ರೀತಿಯಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲು ಪ್ರಯತ್ನಿಸಿದ್ದರು. ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ ಎರಡು ಲೇಯರ್ ಇರುವ ಬನಿಯನ್‌ನ ಒಳಗೆ ಪೇಸ್ಟ್ ರೂಪದಲ್ಲಿ ಬಾಯಿ ಒಳಗೆ ಮತ್ತು ಗುದದ್ವಾರದಲ್ಲಿ ಹೀಗೆ ವಿವಿಧ ರೀತಿಯಲ್ಲಿ ತರಲಾಗಿದೆ. ಇದರೊಂದಿಗೆ ದುಬೈನಿಂದ ಬಂದಿಳಿದಿದ್ದ ಪ್ರಯಾಣಿಕನಿಂದ 3,20,265 ರೂ. ಮೌಲ್ಯದ ಇ-ಸಿಗರೇಟ್‌ಗಳಲ್ಲಿ ಬಳಸುವ ಇ-ನಿಕೊಟಿನ್ ಲಿಕ್ವಿಡ್ ಮತ್ತು ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆತ ಬ್ಯಾಗ್‌ನಲ್ಲಿ ಮರೆಮಾಚಿ ಸಾಗಾಣಿಕೆಗೆ ಯತ್ನಿಸಿದ್ದ. ಪ್ರಕರಣಗಳ ಕುರಿತ ವಿಚಾರಣೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿನೇ ದಿನೇ ಅಕ್ರಮ ಚಿನ್ನ ಸಾಗಾಟಕ್ಕೆ ಸಾಕ್ಷಿಯಾಗ್ತಿದೆ. ತಿಂಗಳಿಗೆ ನಾಲ್ಕೈದು ಅಕ್ರಮ ಚಿನ್ನ ಸಾಗಾಟದ ಪ್ರಕರಣಗಳು ಪತ್ತೆಯಾಗುತ್ತಿದ್ದು, ದುಬೈನಿಂದ ಭಾರೀ ಪ್ರಮಾಣದಲ್ಲಿ ಚಿನ್ನವನ್ನ ಸಾಗಿಸಲಾಗುತ್ತಿದೆ. ಹೀಗೆ ಚಿನ್ನ ಸಾಗಿಸಿ ಸಿಕ್ಕಿಬೀಳೋರು ಮಧ್ಯಮ ವರ್ಗದ ಯುವಕರಾಗಿದ್ದು, ಈ ಸಾಗಾಟದ ಹಿಂದೆ ಕೇರಳದ ಜ್ಯುವೆಲ್ಲರಿ ಮಾಫಿಯಾ ಕೈವಾಡದ ಅನುಮಾನವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
18 ದಿನಗಳಲ್ಲಿ ಕೋಟಿ ಮೌಲ್ಯದ ಚಿನ್ನ ವಶ : ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚಿದ ಗೋಲ್ಡ್ ಸ್ಮಗ್ಲಿಂಗ್!
























