ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ 2ನೇ ಹಂತದಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಜ.21 ರಿಂದ 29ರವರೆಗೆ ಸಂಜೆ 5 ಗಂಟೆಗೆ ಇವತ್ತೂರು ಗ್ರಾಮದ ಕೊಳಕೆ ಶಾಲೆ ಬಳಿಯ ಕಾಲೋನಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ ಜರುಗಲಿದ್ದು, ಕಾರ್ಕಳ ವಿಧಾನಸಭಾ ಕ್ಷೇತ್ರವಾರು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿದೆಯೆಂದು ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆಯವರು ತಿಳಿಸಿದರು.
ಪ್ರಸ್ತುತ ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ಸೂಚನೆಯಂತೆ ಜ.2 ರಿಂದ 12 ರವರೆಗೆ ಬೂತ್ ವಿಜಯ ಅಭಿಯಾನ ಯಶಸ್ವಿಯಾಗಿ ನಡೆದಿದ್ದು, ಬೂತ್ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜವನ್ನು ಕಟ್ಟಿ, ಕಾರ್ಯಕರ್ತರ ಸಭೆ, ಮಾಹಿತಿ ಮತ್ತು ವಾಟ್ಸ್ ಆಪ್ ಗ್ರೂಪ್‌ಗಳನ್ನು ರಚಿಸುವುದರ ಮುಖಾಂತರ ಯಶಸ್ವಿಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ಜ. 21 ರಿಂದ 29 ರವರೆಗೆ ನಡೆಸಲು ಪಕ್ಷ ಸೂಚಿಸಿದ್ದು, ಈ ಅಭಿಯಾನವನ್ನು ಕೂಡ ಯಶಸ್ವಿಗೊಳಿಸಬೇಕು ಹಾಗೂ ಪಕ್ಷವನ್ನು ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಎರಡನೇ ಹಂತದಲ್ಲಿ ಐದು ಅಂಶಗಳ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳ ಕರಪತ್ರವನ್ನು ಮನೆ ಮನೆಗೆ ತಲುಪಿಸಿ, ಪಕ್ಷದ ಚಿಹ್ನೆಯ ಸ್ಟಿಕ್ಕರ್ ವಿತರಣೆ, ಪಕ್ಷದ ಸದಸ್ಯತ್ವ 3 ವರ್ಷ ಅವಧಿ ಮುಗಿದಿದ್ದು, ಮತ್ತೊಮ್ಮೆ ಮಿಸ್ಡ್ ಕಾಲ್ ಕೊಡುವುದರ ಮೂಲಕ ಸದಸ್ಯತ್ವ ನೋಂದಣಿ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಂಪರ್ಕ, ಸರಕಾರದ ಸಾಧನೆಗಳ ಗೋಡೆಬರಹ ಮತ್ತು ಡಿಜಿಟಲ್ ಬರಹಗಳನ್ನು ಕೂಡ ಹಾಕಲಾಗುವುದು. ಹಾಗೆಯೇ ತಿಂಗಳ ಕೊನೆಯ ಭಾನುವಾರ ಪ್ರಧಾನಮಂತ್ರಿಗಳ ಮನ್ ಕೀ ಬಾತ್ ಕಾರ್ಯಕ್ರಮವನ್ನು ಪ್ರತೀ ಬೂತ್‌ಗಳಲ್ಲಿ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಆಲಿಸಲಿದ್ದಾರೆ ಎಂದು ಮಹಾವೀರ್ ಹೆಗ್ಡೆ ತಿಳಿಸಿದ್ದಾರೆ.
ಜ. 21 – 29 : ಬಿಜೆಪಿ ವತಿಯಿಂದ ಬೂತ್ ವಿಜಯ ಸಂಕಲ್ಪ ಅಭಿಯಾನ
























