ಅಲ್ಲಿ ಶ್ರೀರಾಮ ಇಲ್ಲಿ ಪರಶುರಾಮ

ಮತ್ತೊಮ್ಮೆ ಕಾರ್ಕಳದಲ್ಲಿ ಸಾಂಸ್ಕೃತಿಕ ಸಮ್ಮಿಲನ

ಅಯೋಧ್ಯೆಯಲ್ಲಿ ಹಿಂದೂಗಳ ಆರಾಧ್ಯ ದೇವರಾದ ಶ್ರೀರಾಮನ ಭವ್ಯವಾದ ಮಂದಿರ ನಿರ್ಮಾಣವಾಗುತ್ತಿದ್ದರೆ ಇತ್ತ ಕಾರ್ಕಳದ ಬೈಲೂರಿನಲ್ಲಿ ತುಳುನಾಡಿನ ಸೃಷ್ಟಿಕರ್ತನಾದ ಪರಶುರಾಮನ ಕೊಡಲಿಯೆತ್ತಿ ನಿಂತಿರುವ ಸುಂದರ ಮೂರ್ತಿ ಪ್ರತಿಷ್ಠಾಪನೆ ಆಗಲಿದೆ.
ಕಾರ್ಕಳದ ಸಮಗ್ರ ಅಭಿವೃದ್ಧಿಯ ರೂವಾರಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅವರ ಮತ್ತೊಂದು ಅದ್ಭುತ ಪರಿಕಲ್ಪನೆಗೆ ಸಾಕ್ಷಿಯಾಗಿ ಬೈಲೂರಿನ ಎತ್ತರದ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಹಲವಾರು ವೈಶಿಷ್ಟ್ಯತೆಗಳಿಂದ ಕೂಡಿದ ‘ಪರಶುರಾಮ ಥೀಂ ಪಾರ್ಕ್’ ಜನವರಿ 27ರಂದು ಲೋಕಾರ್ಪಣೆಯಾಗಲಿದೆ. ಎತ್ತರದ ಬೆಟ್ಟದ ಮೇಲೆ ನಿಂತು ನೋಡಿದರೆ ಒಂದು ಕಡೆ ಕೊಡಲಿಯೆತ್ತಿ ನಿಂತ ಪರಶುರಾಮನ ದಿವ್ಯ ನೋಟವಾದರೆ ಇನ್ನೊಂದು ಕಡೆ ಸುತ್ತಲು ಕಾಣುವ ನಿಸರ್ಗದ ರುದ್ರ ರಮಣೀಯ ದೃಶ್ಯ ಎಂಥವರನ್ನು ರೋಮಾಂಚನಗೊಳಿಸುತ್ತದೆ. ಮತ್ತೊಮ್ಮೆ ಕಾರ್ಕಳ ಸಾಂಸ್ಕೃತಿಕ ಜಗತ್ತಿನ ಗಮನ ಸೆಳೆಯಲಿದೆ. ತುಳನಾಡಿನ ಆಕರ್ಷಣೆಯ ಆಯಸ್ಕಾಂತವಾಗಲಿದೆ.
‌‌‌ ‌ಇದೇ ಜನವರಿ 28, 28, 29 ರಂದು ಮೂರು ದಿನ ನಡೆಯುವ ಈ ಕಾರ್ಯಕ್ರಮ ಲಕ್ಷಾಂತರ ಜನರು ಸೇರುವುದಕ್ಕೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೇದಿಕೆ ಸಿದ್ಧವಾಗುತ್ತಿದೆ. ಸೃಷ್ಟಿಕರ್ತನ ಪ್ರತಿಷ್ಠಾಪನೆಗಾಗಿ ಕಾರ್ಕಳ ರಂಗುಗೊಳ್ಳುತ್ತಿದೆ. ಈ ಅವಿಸ್ಮರಣೀಯ ಕಾರ್ಯಕ್ರಮ ಕರಾವಳಿ ಕನ್ನಡಿಗರನ್ನು ಕೈಬೀಸಿ ಕರೆಯುತ್ತಿದೆ.
‌‌‌‌‌ ಪ್ರಭಾಕರ ಶೆಟ್ಟಿ ಕೊಂಡಳ್ಳಿ













































error: Content is protected !!
Scroll to Top