ಚಂಡೀಗಢ : ಪಂಜಾಬ್‌ನ ಫಿಲ್ಲೋರ್‌ನಲ್ಲಿ ಶನಿವಾರ ಬೆಳಗ್ಗೆ ಭಾರತ್ ಜೋಡೊ ಯಾತ್ರೆಯಲ್ಲಿ ನಡೆಯುತ್ತಿದ್ದ ಜಲಂಧರ್‌ನ ಕಾಂಗ್ರೆಸ್ ಸಂಸದ ಚೌಧರಿ ಸಂತೋಖ್ ಸಿಂಗ್ ಕುಸಿದು ಬಿದ್ದು ನಿಧನರಾದರು. ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆಗೆ ನಡೆದುಕೊಂಡು ಹೋಗುತ್ತಿದ್ದ ಅವರು ಹೃದಯ ಬಡಿತ ಹೆಚ್ಚಾದಾಗ ಇದ್ದಕ್ಕಿದ್ದಂತೆ ಅಸ್ವಸ್ಥರಾದರು.
ಕಾಂಗ್ರೆಸ್ ನಾಯಕನನ್ನು ಫಗ್ವಾರದ ವಿರ್ಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸುದ್ದಿ ತಿಳಿದ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಿಂದ ಹೊರಟು ಆಸ್ಪತ್ರೆ ತಲುಪಿದರು.
ಭಾರತ್ ಜೋಡೊ ಯಾತ್ರೆಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಸಂಸದ ಕುಸಿದು ಬಿದ್ದು ಸಾವು





















