ಟಯರ್‌ ಸ್ಫೋಟಗೊಂಡು ಮರಕ್ಕೆ ಗುದ್ದಿದ ಪಿಕಪ್‌

ಕಾರ್ಕಳ : ಟಯರ್‌ ಸ್ಫೋಟಗೊಂಡು ಪಿಕಪೊಂದು ಮರಕ್ಕೆ ಗುದ್ದಿದ ಘಟನೆ ಕುಕ್ಕುಂದೂರು ಗ್ರಾಮದ ಹಾರ್ಜೊಡ್ಡು ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಪರಿಣಾಮ ಪಿಕಪ್‌ನಲ್ಲಿದ್ದ ಉಡುಪಿ ಮೂಲದ ಸಂದೀಪ್‌ ಗಾಯಗೊಂಡಿದ್ದಾರೆ. ಕಾರ್ಕಳದಿಂದ ಮಣಿಪಾಲ ಸಾಗುತ್ತಿದ್ದ ವೇಳೆ ಹಾರ್ಜೊಡ್ಡು ಕ್ರಾಸ್‌ ಬಳಿ ಟಯರ್‌ ಒಡೆದಿದ್ದು, ನಿಯಂತ್ರಣ ಕಳೆದುಕೊಂಡ ಪಿಕಪ್‌ ಮರಕ್ಕೆ ಢಿಕ್ಕಿಯಾಗಿದೆ. ಚಾಲಕ ರಘುರಾಮ್‌ ಯಾವುದೇ ಗಾಯವಿಲ್ಲದೇ ಪಾರಾಗಿದ್ದಾರೆ.













































error: Content is protected !!
Scroll to Top