ಬಸ್‌ ನಿಲ್ದಾಣಕ್ಕೆ ಬಿಡುತ್ತೇವೆ ಎಂದು ವ್ಯಕ್ತಿಯ ಸರ, ಮೊಬೈಲ್‌ ದೋಚಿದ ಕಳ್ಳರು

ಕಾರ್ಕಳ ನಗರದಲ್ಲಿ ನಡೆದ ಘಟನೆ

ಕಾರ್ಕಳ: ವ್ಯಕ್ತಿಯೊಬ್ಬರ ಚಿನ್ನಾಭರಣಗಳನ್ನು ಮತ್ತು ನಗದನ್ನು ದೋಚಿದ ಘಟನೆ ಕಾರ್ಕಳ ನಗರದಲ್ಲಿ ಜ.4ರಂದು ಸಂಭವಿಸಿದೆ. ರೆಂಜಾಳ ಗ್ರಾಮದ ಕಡಂಬಾಕ್ಯಾರ್‌ ಮನೆಯ ಸುಧಾಕರ ಶೆಟ್ಟಿ (60) ಎಂಬವರು ಬೆಂಗಳೂರಿಗೆ ಹೋಗುವ ಸಲುವಾಗಿ ಜ.4ರಂದು ರಾತ್ರಿ ನಗರಕ್ಕೆ ಬಂದಿದ್ದರು. ಬಸ್‌ ಬರಲು ಸಮಯವಿದ್ದ ಕಾರಣ ಬಸ್ಸಿನ ಕಚೇರಿ ಸಮೀಪವೇ ಇದ್ದು ಮದ್ಯಪಾನ ಮಾಡಿದ್ದರು. ಅಲ್ಲಿಂದ 9.45ರ ಹೊತ್ತಿಗೆ ಹೊರಟು ನಡೆದುಕೊಂಡು ಕಾರ್ಕಳ ಬಸ್‌ ನಿಲ್ದಾಣತ್ತ ಹೋಗುತ್ತಿರುವಾಗ ಎದುರಾದ ಇಬ್ಬರು ಅಪರಿಚಿತ ವ್ಯಕ್ತಿಗಳು ಎಲ್ಲಿಗೆ ಹೋಗುತ್ತೀರಿ ಎಂದು ಕೇಳಿ ನಾವು ಬಸ್ ಸ್ಟಾಂಡ್‌ಗೆ ಬಿಡುತ್ತೇವೆಂದು ಹೇಳಿ ಬೇರೆ ಯಾರಾದರು ನೋಡಿದರೆ ನಿಮ್ಮ ಚಿನ್ನ ಹಾಗೂ ಹಣವನ್ನು ತೆಗೆದುಕೊಳ್ಳುತ್ತಾರೆ ಅದನ್ನು ಜಾಗ್ರತೆಯಾಗಿ ಚೀಲದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದರು. ಮದ್ಯದ ನಶೆ ಇಳಿದ ಮೇಲೆ ನೋಡಿದಾಗ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮೆಂತೆ ಚೈನ್, ಒಂದು ಉಂಗುರ ಮತ್ತು ನವರತ್ನ ಉಂಗುರ ಹಾಗೂ ಕಿಸೆಯಲ್ಲಿದ್ದ ನಗದು 1500 ಹಾಗೂ ಮೊಬೈಲ್‌ ನಾಪತ್ತೆಯಾಗಿತ್ತು. ಒಟ್ಟು 1,52,500 ರೂ. ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

















































error: Content is protected !!
Scroll to Top