ಜ. 10ರಂದು 11ನೇ ವರ್ಷದ ಮಹಾಪೂಜೆ – ಯಕ್ಷಗಾನ
ಕಾರ್ಕಳ : ಶ್ರೀ ಭಕ್ತವತ್ಸಲ ಅಯ್ಯಪ್ಪ ಸೇವಾ ಸಮಿತಿ ಮುರತ್ತಂಗಡಿ ಸಾಣೂರು ಇದರ 11ನೇ ವರ್ಷದ ಮಹಾಪೂಜೆ ಜ. 10ರ ಮಂಗಳವಾರ ಗೆಜ್ಜೆಗಿರಿ ತಂತ್ರಿಗಳಾದ ಶಿವಾನಂದ ಶಾಂತಿ ಮೂಡಬಿದ್ರೆ ಅವರ ಪೌರೋಹಿತ್ಯದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 6ರಿಂದ ಗಣಹೋಮ, ಸ್ವಾಮಿಗಳ ಇರುಮುಡಿ ಕಟ್ಟುವುದು ಬಳಿಕ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12ರಿಂದ ಮಹಾಪೂಜೆ ಜರುಗಲಿದ್ದು ಅನಂತರ ಅನ್ನಸಂತರ್ಪಣೆ ನಡೆಯಲಿದೆ. ಶಿಬಿರದ ಗುರುಸ್ವಾಮಿಗಳಾದ ವಿಘ್ನೇಶ್, ಯೋಗೀಶ್ ಇರ್ವತ್ತೂರು ಉಪಸ್ಥಿತಿಯಲ್ಲಿ, ರಮೇಶ್ ಎಂ.ಎಸ್. ಸಂಯೋಜನೆಯಲ್ಲಿ ದಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಶ್ರೀ ದೇವಿ ಮಹಾತ್ಮೆ
ಸಂಜೆ ಗಂಟೆ 5:30ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ತುಳಸಿ ಶೆಟ್ಟಿ ಮತ್ತು ಗಣೇಶ್ ಶೆಟ್ಟಿ ಹಾಗೂ ಮಕ್ಕಳ ಸೇವಾರ್ಥವಾಗಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಭಕ್ತವತ್ಸಲ ಅಯ್ಯಪ್ಪ ಸೇವಾ ಸಮಿತಿಯ ಗುರುಸ್ವಾಮಿ ಗೋವಾ ಉದ್ಯಮಿ ಗಣೇಶ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

























