ಯುವತಿಯನ್ನು 12 ಕಿ.ಮೀ. ಎಳೆದೊಯ್ದ ಕಾರು

ಸ್ಕೂಟಿಗೆ ಡಿಕ್ಕಿ ಹೊಡೆದರೂ ಚಾಲಕನಿಗೆ ಗೊತ್ತಾಗಲಿಲ್ಲ

ಹೊಸದಿಲ್ಲಿ : ಯುವತಿಯೋರ್ವಳ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು 12 ಕಿ.ಮೀ ದೂರ ಎಳೆದೊಯ್ದ ಹೃದಯ ವಿದ್ರಾವಕ ಟನೆ ದಿಲ್ಲಿಯಲ್ಲಿ ಸಂಭವಿಸಿದೆ. ಐುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮಾರುತಿ ಬಲೆನೊ ಕಾರು ಯುವತಿ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಕಾರಿನ ಚಕ್ರದಡಿ ಸಿಲುಕಿದ್ದಾಳೆ. ಆದರೆ ಇದರ ಅರಿವೇ ಇಲ್ಲದೆ ಕಾರು ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕ್ರೆಡಿಟ್ ಕಾರ್ಡ್ ಸಂಗ್ರಹ ಏಜೆಂಟ್, ಚಾಲಕ ಮತ್ತು ಪಡಿತರ ಅಂಗಡಿ ಮಾಲೀಕ ಸೇರಿದ್ದಾರೆ. ಇವರೆಲ್ಲರೂ ಹೊಸ ವರ್ಷದ ಪಾರ್ಟಿ ಮಾಡಿ ವಾಪಸ್ಸಾಗುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯ ಸುಲ್ತಾನ್‌ಪುರಿಯಲ್ಲಿ ಹೊಸ ವರ್ಷಾಚರಣೆ ಆರಂಭವಾದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ. ಅಪಘಾತ ಸಂಭವಿಸಿದರೂ ಅದರ ಬಗ್ಗೆ ಅರಿವೇ ಇಲ್ಲದೆ ಕಾರು ಚಲಾಯಿಸಿದ್ದಾರೆ. ಪರಿಣಾಮವಾಗಿ ಯುವತಿ ಅತ್ಯಂತ ಭೀಕರವಾಗಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 3.24ಕ್ಕೆ ಕಾರೊಂದು ಶವವನ್ನು ಎಳೆದುಕೊಂಡು ಹೋಗುತ್ತಿರುವುದರ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಮುಂಜಾನೆ 4.11ಕ್ಕೆ ರಸ್ತೆಯಲ್ಲಿ ಮಹಿಳೆಯ ಶವ ಬಿದ್ದಿರುವ ಬಗ್ಗೆ, ಪೊಲೀಸರಿಗೆ ಮತ್ತೊಂದು ಕರೆ ಬಂದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಪಘಾತ ಮಾಡಿದ ಕಾರನ್ನು ಪತ್ತೆಹಚ್ಚಿ ಕಾರಿನಲ್ಲಿದ್ದವರನ್ನು ಬಂಧಿಸಿದ್ದಾರೆ.















































































































































error: Content is protected !!
Scroll to Top