ಸಾಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ

ಕಾರ್ಕಳ: ಸಾಣೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ಯುವಕ ಮಂಡಲ ಸಾಣೂರು ಇವರ ಸಹಭಾಗಿತ್ವದಲ್ಲಿ ಡಿ.22ರಂದು ಕಾಲೇಜಿನ ಮುದ್ದಣ ರಂಗಮಂದಿರದಲ್ಲಿ ನಡೆಯಿತು.
ಕೆ.ಎಂ.ಎಫ್ ಇದರ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ತಮ್ಮ ಮಾತಿನಲ್ಲಿ 5ಜಿ
ಮಕ್ಕಳು ಂತರ್ಜಾಲದ ಮಾಯೆಗೆ ಸಿಲುಕಿ ಮಾತಾಪಿತರನ್ನು ಮರೆಯಬಾರದು, ಒಳ್ಳೆಯ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಬೇಕೆಂದು ದಿಕ್ಸೂಚಿ ಭಾಷದಲ್ಲಿ ಕೆಎಂಫ್‌ ನಿರ್ದೇಶಕ ಸಾಣೂರು ನರಸಿಂಹ ಕಾಮತ್‌ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ, ಕಾಲೇಜಿನ ಹಸ್ತಪ್ರತಿ ವಾರ್ಷಿಕ ವಿಶೇಷಾಂಕ ಪ್ರೇರಣಾವನ್ನು ಅನಾವರಣಗೊಳಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕನ್ನಡ ಮತ್ತು ಸಂಸ್ಕೃತಿಯ ಸೊಗಡನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರುಣಾಕರ, ಕೋಟ್ಯಾನ್, ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ, ಹಿರಿಯ ಶಿಕ್ಷಕ ಗಣೇಶ್ ಮೊಗವೀರ, ಎಸ್.ಡಿ.ಎಂ ಸಿಯ ಅಧ್ಯಕ್ಷ ಜನಾರ್ದನ ಆಚಾರ್ಯ, ಕಾಲೇಜಿನ ಸಿಬಿಸಿಯ
ಸದಸ್ಯ ಡಾ| ಮೋಹನದಾಸ್ ಜಿ. ಪ್ರಭು ಮಾತನಾಡಿ ಶುಭ ಹಾರೈಸಿದರು. ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯಕ್ಕೆ ದೇಣಿಗೆ ನೀಡಿದ ಡಾ| ಜಿತೇಂದ್ರ ಕಿಣಿ ಬೈಲೂರು ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ನಡೆಸಿದ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಅಶೋಕ್ ಶೆಟ್ಟಿಯವರು ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಣೂರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿದರು. ಪ್ರಾಂಶುಪಾಲೆ ಸುಚೇತಾ ಕಾಮತ್ ಕಾಲೇಜಿನ ವರದಿ ಮಂಡಿಸಿದರು. ಜಗದೀಶ್ ನಾಯಕ್ ಹಾಗೂ ಡಾ.ಸುಮತಿ ಪಿ. ನಿರೂಪಿಸಿದರು ಉಪನ್ಯಾಸಕರು, ಅಧ್ಯಾಪಕರು, ಗ್ರಾಮ ಪಂಚಾಯತ್‌ ಪದಾಧಿಕಾರಿಗಳು, ಯುವಕ ಮಂಡಲದ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನರೇಶ್ ವಂದನಾರ್ಪಣೆ ಗೈದರು. ಮಧ್ಯಾಹ್ನ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ 2022 ಕಾರ್ಯಕ್ರಮ ನಡೆಯಿತು.





























































































































error: Content is protected !!
Scroll to Top