ನ.1ರಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ
ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕುರಿತಾಗಿರುವ ಸಾಕ್ಷ್ಯಚಿತ್ರ ಗಂಧದ ಗುಡಿಗೆ ಸರಕಾರ ತೆರಿಗೆ ವಿನಾಯಿತಿ ಘೋಷಿಸಿದೆ.
ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಅಪ್ಪು ಈಗಲೂ ನಮ್ಮ ಜತೆ ಇದ್ದಾರೆ ಎಂಬ ಅನುಭವವಾಗುತ್ತಿದೆ. ರಾಜ್ಯದೆಲ್ಲೆಡೆ ಈಗಲೂ ಜನರು ಅವರನ್ನು ಆರಾಧಿಸುತ್ತಿದ್ದಾರೆ. ಯಾವ ಹಳ್ಳಿಗೂ ಹೋದರೂ ಪುನೀತ್ ಕಟೌಟ್ ಕಾಣಸಿಗುತ್ತದೆ. ಇದು ಜನರು ಅಪ್ಪು ಮೇಲಿಟ್ಟಿರುವ ವಾತ್ಸಲ್ಯಕ್ಕೆ ಸಾಕ್ಷಿ ಎಂದಿದ್ದಾರೆ.