ಸಿನೇಮಾದ ಕತೆ ಮತ್ತು ರಿಷಬ್ ನಿರ್ದೇಶನಕ್ಕೆ ಮೆಚ್ಚುಗೆ
ಮಂಗಳೂರು: ಅಪಾರ ಜನಮೆಚ್ಚುಗೆ ಪಾತ್ರವಾಗಿರುವ ಕಾಂತಾರ ಸಿನೇಮಾವನ್ನು ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ನಿನ್ನೆ ಮಂಗಳೂರಿನ ಥಿಯೇಟರ್‌ನಲ್ಲಿ ವೀಕ್ಷಿಸಿದ್ದಾರೆ.
ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಹೆಗ್ಗಡೆಯವರು ಚಿತ್ರ ಮೂಡಿಬಂದಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾ ವೀಕ್ಷಣೆಗೆ ಆಗಮಿಸುತ್ತಿದ್ದಂತೆ, ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಚಿತ್ರಮಂದಿರದಲ್ಲಿಯೇ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಲಾಯಿತು.
ಮಕ್ಕಳು, ಮೊಮ್ಮಕ್ಕಳೊಂದಿಗೆ ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಸಂಜೆ 7 ಗಂಟೆಯ ಶೋಗೆ ತೆರಳಿ ಸಿನಿಮಾ ನೋಡಿದ್ದಾರೆ.
ದೇಶವ್ಯಾಪಿ ಮೆಚ್ಚುಗೆ ಪಡೆದಿರುವ ಕಾಂತಾರ ಸಿನಿಮಾ ಬಗ್ಗೆ ಮತ್ತು ಈ ಸಿನಿಮಾದ ಪ್ರಧಾನ ವಿಷಯ ವಸ್ತು ದಕ್ಷಿಣ ಕನ್ನಡದ ಭೂತಕೋಲದ ಬಗ್ಗೆಯೂ ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






































































