Thursday, December 1, 2022
spot_img
Homeಸುದ್ದಿಮಂಗಳೂರು : ವಿಜ್ಞಾನ ಮೇಳದ ಪೆಂಡಾಲ್ ಕುಸಿದು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಗಾಯ : ತಪ್ಪಿದ...

ಮಂಗಳೂರು : ವಿಜ್ಞಾನ ಮೇಳದ ಪೆಂಡಾಲ್ ಕುಸಿದು ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಗಾಯ : ತಪ್ಪಿದ ಭಾರೀ ಅನಾಹುತ

ಮಂಗಳೂರು: ವಿಜ್ಞಾನ ಮೇಳದ ಪೆಂಡಾಲ್ ಕುಸಿದು ಹಲವರಿಗೆ ಗಾಯವಾಗಿರುವಂತಹ ಘಟನೆ ಕೇರಳದ ಕಾಸರಗೋಡಿನ ಮಂಜೇಶ್ವರ ಬೇಕೂರಿನಲ್ಲಿ ನಡೆದಿದೆ. ಅ.21ರಂದು ಸರಕಾರಿ ಶಾಲಾ ಆವರಣದಲ್ಲಿ ವಿಜ್ಞಾನ ಮೇಳ ನಡೆಯುತಿದ್ದು, ಕಬ್ಬಿಣದ ಶೀಟ್ ಅಳವಡಿಸಿದ್ದ ಬೃಹತ್ ಪೆಂಡಾಲ್ ಕುಸಿತವಾಗಿದೆ. ಮೇಳದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ, ಕೆಲ ಶಿಕ್ಷಕರು ಮತ್ತು ಕಾರ್ಯಕ್ರಮದ ತೀರ್ಪುಗಾರರಿಗೂ ಗಾಯಗಳಾಗಿದ್ದು, ಮಂಗಲ್ಪಾಡಿ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಂಜೇಶ್ವರ ಸರಕಾರಿ ಶಾಲೆಯ ಉಪಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ವಿವಿಧ ಶಾಲೆಗಳಿಂದ ಆಯ್ದ ವಿದ್ಯಾರ್ಥಿಗಳು ಆಗಮಿಸಿದ್ದರು. ಶಾಲಾ ಆವರಣದಲ್ಲಿ ನಿರ್ಮಿಸಿದ್ದ ಕಬ್ಬಿಣದ ಶೀಟ್ ಅಳವಡಿಸಿದ್ದ ಬೃಹತ್ ಪೆಂಡಾಲ್ ಅಡಿಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡಿದ್ದರು. ಅವಘಡ ಸಂಭವಿಸಿದಾಗ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ತುರ್ತು ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿ, ಸ್ಥಳೀಯರ ಸಹಕಾರದಿಂದ ಶೀಟ್‌ಗಳನ್ನು ಸರಿಸಿ, ಅಡಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ.

LEAVE A REPLY

Please enter your comment!
Please enter your name here

Most Popular

error: Content is protected !!