78 ತಾಸಿನೊಳಗೆ ಉಗ್ರನನ್ನು ಎನ್‌ಕೌಂಟರ್ ಮಾಡಿದ ಭದ್ರತಾ ಪಡೆ
ಶ್ರೀನಗರ: ಶೋಪಿಯಾನ್‌ನಲ್ಲಿ ಉತ್ತರ ಪ್ರದೇಶದ ಇಬ್ಬರು ಕೂಲಿ ಕಾರ್ಮಿಕರನ್ನು ಗ್ರೆನೇಡ್ ಸ್ಫೋಟಿಸಿ ಸಾಯಿಸಿದ್ದ ಹೈಬ್ರಿಡ್ ಉಗ್ರ ಘಟನೆ ನಡೆದ 78 ತಾಸಿನೊಳಗೆ ಉಗ್ರರ ಜತೆ ನಡೆದ ಕಾಳದಲ್ಲಿ ಹತನಾಗಿದ್ದಾನೆ.
ಕೂಲಿ ಕಾರ್ಮಿಕರ ಹತ್ಯೆಗೆ ಸಂಬಂಧಿಸಿದಂತೆ ಹೈಬ್ರಿಡ್ ಉಗ್ರ ಇಮ್ರಾನ್ ಬಶೀರ್ ಗನಿ ಎಂಬಾತನನ್ನು ಭದ್ರತಾ ಪಡೆ ಬಂಧಿಸಿತ್ತು,. ಅವನನ್ನು ಇಟ್ಟುಕೊಂಡು ಉಳಿದ ಉಗ್ರರಿಗಾಗಿ ಕೂಲಿ ಕಾರ್ಮಿಕರನ್ನು ಸಾಯಿಸಿದೆ ಪ್ರದೇಶದಲ್ಲೇ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ , ಉಗ್ರರ ಜತೆ ನಡೆದ ಗುಂಡಿನ ಚಕಮಕಿಗೆ ಸಮ್ರಾನ್ ಬಶೀರ್ ಬಲಿಯಾಗಿದ್ದಾನೆ ಎಂದು ಭದ್ರತಾ ಪಡೆ ಅಧಿಕಾರಿ ಟ್ವೀಟ್ ಮಾಡಿದ್ದಾರೆ.