ಫೈನಲ್‌ನಲ್ಲಿ ಗೆದ್ದ ಭಾರತ: ಸರಣಿ 2-1 ಅಂತರದಲ್ಲಿ ವಶ

ಸೂರ್ಯಕುಮಾರ್‌, ಕೊಹ್ಲಿ ಭರ್ಜರಿ ಬ್ಯಾಟಿಂಗ್‌

ಹೈದರಾಬಾದ್: ಆಸ್ಟ್ರೇಲಿಯ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.
ಹೈದರಾಬಾದ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ನಿಗದಿತ ಓವರ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಪೇರಿಸಿತ್ತು. ಆಸ್ಟ್ರೇಲಿಯ ನೀಡಿದ 187 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಒಂದು ಎಸೆತ ಬಾಕಿ ಇರುವಂತೆ 187 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಆಸ್ಟ್ರೇಲಿಯಾ ಪರ ಕ್ಯಾಮರೂನ್ ಗ್ರೀನ್ 52, ಆರೋನ್ ಪಿಂಚ್ 7, ಸ್ಟೀವನ್ ಸ್ಮಿತ್ 9, ಗ್ಲೇನ್ ಮ್ಯಾಕ್ಸ್ ವೇಲ್ 6, ಜೋಶ್ ಇಂಗ್ಲಿಸ್ 24, ಟೀಮ್ ಡೇವಿಡ್ 54 ಪೇರಿಸಿದ್ದಾರೆ. ಭಾರತ ಪರ ಬೌಲಿಂಗ್‌ನಲ್ಲಿ ಅಕ್ಷರ್ ಪಟೇಲ್ 3, ಭುವನೇಶ್ವರ್ ಕುಮಾರ್, ಚಹಾಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದಿದ್ದಾರೆ.
ಭಾರತ ಪರ ಕೆಎಲ್ ರಾಹುಲ್ 1, ರೋಹಿತ್ ಶರ್ಮಾ 17, ವಿರಾಟ್ ಕೊಹ್ಲಿ 63, ಸೂರ್ಯಕುಮಾರ್ ಯಾದವ್ 69, ಹಾರ್ದಿಕ್ ಪಾಂಡ್ಯ ಅಜೇಯ 25 ರನ್ ಪೇರಿಸಿದ್ದಾರೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಿಂದ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.









































































































error: Content is protected !!
Scroll to Top